ಬದಿಯಡ್ಕ: ಕೇರಳ ರಾಜ್ಯ ಪೆನ್ಶನರ್ಸ್ ಸಂಘದ ಕುಂಬ್ದಾಜೆ ಘಟಕದ ಸಮ್ಮೇಳನ ಮವ್ವಾರು ಷಢಾನನ ಗ್ರಂಥಾಲಯದ ಕಾರ್ಯಾಲಯದಲ್ಲಿ ಜರಗಿತು. ಘಟಕದ ಅಧ್ಯಕ್ಷ ಸೀತಾರಾಮ ರಾವ್ ಪಿಲಿಕೂಡ್ಲು ಅಧ್ಯಕ್ಷತೆ ವಹಿಸಿ ಮಾತನಾಡಿ ನಿವೃತ್ತಿಯ ಜೀವನದಲ್ಲಿರುವವರ ಸಮಸ್ಯೆಗಳನ್ನು ಪರಿಹರಿಸಲು ಎಲ್ಲಾ ಸದಸ್ಯರುಗಳು ಸಹಕರಿಸಬೇಕು. ಸಂಘಟನೆಯ ಆದರ್ಶಗಳನ್ನು ಒಪ್ಪಿಕೊಂಡು ನಿವೃತ್ತರಾದ ಎಲ್ಲಾ ಉದ್ಯೋಗಿಗಳೂ ಸಂಘಟನೆಯನ್ನು ಸೇರಿಕೊಳ್ಳಬೇಕೆಂದು ಕರೆಯಿತ್ತರು. ಪಾಂತ್ಯ ಉಪಾಧ್ಯಕ್ಷ ಯಂ. ಈಶ್ವರರಾವ್ ಸಂಘಟನೆಯ ಬೆಳವಣಿಗೆಯ ಬಗ್ಗೆ ಮಾತನಾಡಿದರು. ಜಿಲ್ಲಾ ಸಮಿತಿ ಅಧ್ಯಕ್ಷ ಶ್ರೀಧರ ಭಟ್, ಜಿಲ್ಲಾ ಕಾರ್ಯದರ್ಶಿ ಎನ್ ಕೆ ಅರವಿಂದ ಕುಮಾರ್ ಮಾತನಾಡಿದರು.
ಸಂಘಟನೆಗೆ ನವಾಗತರಾಗಿ ಆಗಮಿಸಿದ ಬಾಲಕೃಷ್ಣ ಮಾಸ್ತರ್, ಕುಞಂಬು ನಾಯರ್, ಡಾ ಸೂರ್ಯನಾರಾಯಣ ಭಟ್ ಇವರುಗಳನ್ನು ಶಾಲು ಹೊದಿಸಿ ಸ್ವಾಗತಿಸಲಾಯಿತು. ವೇದಿಕೆಯಲ್ಲಿ ಎಣ್ಮಕಜೆ ಪಂಚಾಯಿತಿ ಘಟಕದ ಸದಸ್ಯ ಬಿ. ನಾಗರಾಜ ಭಟ್ ಉಪಸ್ಥಿತರಿದ್ದರು. ನೂತನ ಪದಾಧಿಕಾರಿಗಳನ್ನು ನೇಮಿಸಲಾಯಿತು. ಅಧ್ಯಕ್ಷರಾಗಿ ಸೂರ್ಯನಾರಾಯಣ ಭಟ್ ಅಗಲ್ಪಾಡಿ, ಉಪಾಧ್ಯಕ್ಷರಾಗಿ ಗಣಪತಿ ಭಟ್ ಮವ್ವಾರು, ಕಾರ್ಯದರ್ಶಿಯಾಗಿ ಬಾಲಕೃಷ್ಣ ಮಾಸ್ತರ್ ನಾರಂಪಾಡಿ, ಜೊತೆ ಕಾರ್ಯದರ್ಶಿಯಾಗಿ ಗಂಗಾಧÀರ ಮಾಸ್ತರ್ ಮವ್ವಾರು ಇವರನ್ನು ಆರಿಸಲಾಯಿತು. ಸೀತಾರಾಮರಾವ್ ಪಿಲಿಕೂಡ್ಲು ಸ್ವಾಗತಿಸಿ, ಸೀತಾರಾಮ ಭಟ್ ಮವ್ವಾರು ವಂದಿಸಿದರು.
ಕೆಎಸ್‍ಪಿಎಸ್ ಕುಂಬ್ಡಾಜೆ ಘಟಕ ಸಮ್ಮೇಳನ
0
ಡಿಸೆಂಬರ್ 21, 2022
Tags