HEALTH TIPS

ಮಕ್ಕಳ ಉದ್ಯಾನ ವನ ಉದ್ಘಾಟನೆ


            ಪೆರ್ಲ: ಪೆರ್ಲದ ವಿವೇಕಾನಂದ ಶಿಶುಮಂದಿರದ ಮಕ್ಕಳ  ಉದ್ಯಾನವನ ಉದ್ಘಾಟನೆ ಹಾಗೂ ವಾರ್ಷಿಕೋತ್ಸವವು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಇವರ ಅಧಕ್ಷತೆ ಯಲ್ಲಿ ಶಿಶುಮಂದಿರದಲ್ಲಿ ಇತ್ತೀಚೆಗೆ ಜರಗಿತು.
           ಉದ್ಯಾನವನದ  ದಾನಿಗಳಾದ ಬಾಳಿಕೆ ಗಣಪತಿ ಭಟ್ ಫಲಕವನ್ನು ಅನಾವರಣಗೊಳಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನಮ್ಮ ಧಾರ್ಮಿಕ ಕ್ಷೇತ್ರಗಳು ಶೈಕ್ಷಣಿಕ ಸಂಸ್ಥೆಗಳ ಏಳಿಗೆಗಾಗಿ ಶ್ರಮಿಸಬೇಕು. ಹಾಗಿದ್ದಲ್ಲಿ ಮಾತ್ರ  ಇಂತಹ ಮೌಲ್ಯಾಧಾರಿತ ಶಿಕ್ಷಣ ನೀಡುವ ವಿದ್ಯಾಸಂಸ್ಥೆಗಳ ಅಭಿವೃದ್ಧಿ ಸಾಧ್ಯ ಎಂದರು. ಶಿಶು ಮಂದಿರಕ್ಕೆ ಕಲಿಕೋಪಕರಣಗಳನ್ನು ನೀಡಿ ಸಹಕರಿಸಿದ ಇನ್ನೋರ್ವ ದಾನಿಗಳಾದ ಡಾ. ಅನಂತಪದ್ಮನಾಭ ಭಟ್ ಮಾತನಾಡಿ, ಇಂತಹ ಶಿಶುಮಂದಿರಗಳಲ್ಲಿ ಸಿಗುವ ಶಿಕ್ಷಣ ಸುಸಂಸ್ಕøತ  ಪ್ರಜೆಗಳನ್ನು ರೂಪಿಸುವಲ್ಲಿ ಸಹಕಾರಿಯಾಗುತ್ತವೆ. ಶಿಶುಮಂದಿರಗಳ ಏಳಿಗೆಗಾಗಿ ಎಲ್ಲರೂ ಶ್ರಮಿಸಬೇಕು ಎಂದರು. ಕಾರ್ಯಕ್ರಮದ ಇನ್ನೋರ್ವ ಅಭ್ಯಾಗತೆ ರಾಜಶ್ರೀ ಟಿ ರೈ ಮಾತನಾಡಿ, ಮೂಲ ಬೇರು ಆಳಕ್ಕಿಳಿದರೇನೇ ಸಸ್ಯಗಳು ಎತ್ತರಕ್ಕೆ  ಬೆಳೆಯಲು ಸಾಧ್ಯ. ಬಾಲ್ಯದಲ್ಲಿ ಕಲಿತ ವಿದ್ಯೆಯೇ ಶಾಶ್ವತವಾಗಿ ನೆಲೆಯೂರಬಲ್ಲದು. ಇಂತಹ ಶಿಶುಮಂದಿರಗಳಲ್ಲೇ ಮಕ್ಕಳು ಬಾಲ್ಯವನ್ನು ಕಳೆದರೆ ಸಂಸ್ಕಾರದ ಬೇರುಗಳು ಮುಂದೆ ಭದ್ರವಾಗಿ ಸನ್ನಡತೆಯ ಪ್ರಜೆಗಳು ಸಮಾಜದಲ್ಲಿ ದೊರಕಲು ಸಾಧ್ಯ. ಪಾಲಕರು ಈ ಬಗ್ಗೆ ಆಸಕ್ತಿ ತಾಳಬೇಕು ಎಂದರು.
         ಶಿಶುಮಂದಿರದ ಶಿಕ್ಷಣದ ಮೌಲ್ಯಗಳನ್ನು ವಿವರಿಸಿ ಹೇಳಿದ ಡಾ. ಕಲ್ಲಡ್ಕ ಪ್ರಭಾಕರ ಭಟ್ ಇವರು ಇನ್ನಾದರೂ ನಮ್ಮ ಪಾಲಕರು ಎಚ್ಚೆತ್ತು ಕೊಳ್ಳದಿದ್ದರೆ ಮುಂದೆ ಕಾಶ್ಮೀರದಲ್ಲಿ ನಡೆದ ಘಟನೆಗಳು ಇಲ್ಲೂ ಆಗಬಹುದು ಎಂದು ಎಚ್ಚರಿಕೆ ಕೊಟ್ಟರು.



     ಸಮಾರಂಭದಲ್ಲಿ ದಾನಿಗಳಾದ ಬಾಳಿಕೆ ಗಣಪತಿ ಭಟ್ ಹಾಗೂ ಡಾ. ಅನಂತ ಪದ್ಮನಾಭ ಭಟ್ ಇವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಸುಂದರ ಉದ್ಯಾನವನವನ್ನು ನಿರ್ಮಿಸಿ ಕೊಟ್ಟ ಡಾ. ಪ್ರವೀಣ ಪುಣಿಚಿತ್ತಾಯರನ್ನೂ ಶಾಲು ಹೊದಿಸಿ ಗೌರವಿಸಲಾಯಿತು. ಶಿಶುಮಂದಿರದ ಅಧ್ಯಕ್ಷೆ  ನಳಿನಿ ಸೈಪಂಗಲ್ಲು ಪ್ರಾಸ್ತಾವಿಕವಾಗಿ ಮಾತನಾಡಿ,ಸ್ವಾಗತಿಸಿದರು. ಶಿಶುಮಂದಿರದ ಮಕ್ಕಳು ಪ್ರಾರ್ಥಿಸಿದರು. ಶಿಶುಮಂದಿರ ಸಮಿತಿಯ ಜಯಶ್ರೀ ಪೆರ್ಲ ಹಾಗೂ ಶ್ಯಾಮಲ ಪತ್ತಡ್ಕ ಕಾರ್ಯಕ್ರಮ ನಿರೂಪಿಸಿದರು. ಶಿಶುಮಂದಿರ ಸಮಿತಿ ಕಾರ್ಯದರ್ಶಿ ಶ್ರೀಹರಿ ಆರ್ ಭರಣೀಕರ್ ವಂದಿಸಿದರು. ಗಣ್ಯರಾದ ಶ್ರೀ ಸುಬ್ರಮಣ್ಯ ಭಟ್ ಕಜಂಪಾಡಿ ಸೇರಿದಂತೆ ನಾಲಂದ ಮಹಾವಿದ್ಯಾಲಯ ಸಮಿತಿಯ ಪದಾಧಿಕಾರಿಗಳು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಪಾಲಕರು, ಶಿಶುಮಂದಿರ ಸಮಿತಿ ಪದಾಧಿಕಾರಿಗಳು, ಊರ ಪರವೂರ ವಿದ್ಯಾಭಿಮಾನಿಗಳು, ಮಕ್ಕಳೂ ಸೇರಿದಂತೆ ನೂರಾರು ಮಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಬಳಿಕ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಭೆ ಮುಕ್ತಾಯ ಗೊಂಡಿತು.


 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries