ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿ 2023-24ನೇ ವಾರ್ಷಿಕ ಯೋಜನೆ ರೂಪೀಕರಣದ ವರ್ಕಿಂಗ್ ಗ್ರೂಫ್ ಸಭೆ ವಿವಿಧ ಸಮಿತಿ ಸಮಕ್ಷಮದಲ್ಲಿ ಪಂಚಾಯತಿ ಸಭಾಂಗಣದಲ್ಲಿ ಜರಗಿತು.
ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಅಧ್ಯಕ್ಷತೆ ವಹಿಸಿ ಮಾತನಾಡಿ, ಎಣ್ಮಕಜೆ ಗ್ರಾ.ಪಂ.ನ್ನು ಸ್ವಾವಲಂಬಿಯಾಗಿ, ಸಾಮಾಜಿಕವಾಗಿ ಸುದೃಢಗೊಳಿಸಲು ಜನಪರ ಯೋಜನೆಯನ್ನು ಕೈಗೊಳ್ಳಲಾಗುತ್ತಿದ್ದು ಇದನ್ನು ಮಾದರಿವಾಗಿಸುವಲ್ಲಿ ಸರ್ವರ ಕಾರ್ಯ ಪ್ರವೃತ್ತಿ ಅತೀ ಅಗತ್ಯವಾಗಿದೆ ಎಂದರು.
ಪಂ.ಉಪಾಧ್ಯಕ್ಷೆ ಡಾ. ಜಹನಾಸ್ ಹಂಸಾರ್, ಜಿ.ಪಂ.ಸದಸ್ಯ ನಾರಾಯಣ ನಾಯ್ಕ್, ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್, ಜಯಶ್ರೀ ಕುಲಾಲ್, ಸೌದಭಿ ಹನೀಫ್, ಪಂ.ಸದಸ್ಯರಾದ ಮಹೇಶ್ ಭಟ್, ಶಶಿಧರ, ಇಂದಿರಾ, ರಾಮಚಂದ್ರ, ನರಸಿಂಹ ಪೂಜಾರಿ,ರಾಧಾಕೃಷ್ಣ ನಾಯಕ್ ಶೇಣಿ, ಕುಸುಮಾವತಿ, ಉಷಾ ಕುಮಾರಿ, ಝರೀನಾ ಮುಸ್ತಾಫ, ಆಶಾಲತಾ, ರೂಪವಾಣಿ ಆರ್. ಭಟ್, ವಿವಿಧ ಇಲಾಖಾ ಉದ್ಯೋಗಿಗಳು ಪಾಲ್ಗೊಂಡಿದ್ದರು.
ಪಂ.ಹೆಡ್ ಕ್ಲಾರ್ಕ್ ಪ್ರೇಮಚಂದ್, ಪಂ.ಯೋಜನಾ ಸಮಿತಿಯ ಆಯಿμÁ ಎ.ಎ ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ವಿವರಣೆ ನೀಡಿದರು.ಬಳಿಕ ಗ್ರೂಫ್ ಚರ್ಚೆ ನಡೆಯಿತು.
ಎಣ್ಮಕಜೆ ಗ್ರಾ.ಪಂ. ಅಭಿವೃದ್ಧಿಗಾಗಿ ವಾರ್ಷಿಕ ಯೋಜನೆ ರೂಪೀಕರಣ ಸಭೆ
0
ಡಿಸೆಂಬರ್ 24, 2022
Tags