ಕಾಸರಗೋಡು: ಪಾಲಕರು ಮತ್ತು ಹಿರಿಯ ನಾಗರಿಕರ ರಕ್ಷಣೆ ಮತ್ತು ಕಲ್ಯಾಣ ನಿಯಮಗಳ ಪ್ರಕಾರ ಕಾಸರಗೋಡು ನಿರ್ವಹಣಾ ನ್ಯಾಯಮಂಡಳಿಯ ಅಧೀನದಲ್ಲಿ ಸಮನ್ವಯಾಧಿಕಾರಿಗಳ ಸಮಿತಿ ರಚಿಸಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿದಾರರು ಹಿರಿಯ ನಾಗರಿಕರು ಮತ್ತು ದುರ್ಬಲ ವಿಭಾಗದವರ ಕಲ್ಯಾಣ, ಶಿಕ್ಷಣ, ಆರೋಗ್ಯ, ಬಡತನ ನಿರ್ಮೂಲನೆ, ಮಹಿಳಾ ಸಬಲೀಕರಣ, ಸಮಾಜ ಕಲ್ಯಾಣ, ಗ್ರಾಮೀಣಾಭಿವೃದ್ಧಿ ಅಥವಾ ಇತರ ಯಾವುದೇ ಸಂಬಂಧ ಪಟ್ಟ ಇತರ ಇಲಾಖೆಗಳಲ್ಲಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುವ ಯವುದಾದರೂ ಸಂಸ್ಥೆಯಲ್ಲಿ ಕನಿಷ್ಠ ಎರಡು ವರ್ಷಗಳ ಕಾನೂನು ಜ್ಞಾನ ಮತ್ತು ಅನುಭವ ಹೊಂದಿರುವ ಹಿರಿಯ ಅಧಿಕಾರಿಯಾಗಿರಬೇಕು ಅಥವಾ ಈ ಕ್ಷೇತ್ರಗಳಲ್ಲಿ ಉತ್ತಮ ಸಾರ್ವಜನಿಕ ಅಭ್ಯಾಸ ಮತ್ತು ಉತ್ತಮ ಕಾನೂನು ಜ್ಞಾನ ಹೊಂದಿರುವ ವ್ಯಕ್ತಿಗಳು ಆಗಿರಬೇಕು.
ಅರ್ಜಿಯನ್ನು ಜಿಲ್ಲಾ ಸಾಮಾಜಿಕ ನ್ಯಾಯ ಕಛೇರಿ, ಸಿವಿಲ್ ಸ್ಟೇಷನ್, ಕಾಸರಗೋಡು-671123 ಎಂಬ ವಿಳಾಸಕ್ಕೆ 2022 ಡಿಸೆಂಬರ್ 20ರ ಮೊದಳೂತಲುಪಿಸಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ(04994 255074)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಸಮನ್ವಯಾಧಿಕಾರಿಗಳ ಸಮಿತಿ: ಅರ್ಜಿ ಆಹ್ವಾನ
0
ಡಿಸೆಂಬರ್ 16, 2022
Tags