ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ಇರುವ ಯಾರೇ ಅದರೂ ಹೊಸದಾಗಿ ಬರುತ್ತಿರುವ ಟ್ರೆಂಡ್‌ಗಳನ್ನು ಪ್ರಯತ್ನಿಸುತ್ತಾರೆ. ಅಂಥಾ ಟ್ರೆಂಡ್ ಗಳಲ್ಲಿ ಒಂದು ಸ್ಲ್ಯಾಪ್ ಥೆರಪಿ. ಇದು ವಿದೇಶಗಳಲ್ಲಿ ಹಿಂದಿನಿಂದಲೂ ಇರುವ ಸೌಂದರ್ಯ ಕಾಳಜಿ ಅದರೂ ಭಾರತದಲ್ಲಿ ಇತ್ತೀಚೆಗೆ ಇದು ಟ್ರೆಂಡ್ ಆಗುತ್ತಿದೆ.
ಏನಿದು ಸ್ಲ್ಯಾಪ್ ಥೆರಪಿ?, ಇದರ ಪ್ರಯೋಜನಗಳೇನು?, ಸ್ಲ್ಯಾಪ್ ಥೆರಪಿ ಮಾಡುವ ವಿಧಾನ ಹೇಗೆ? ಮುಂದೆ ನೋಡೋಣ:
ಹೆಸರೇ ಸೂಚಿಸುವಂತೆ, ಸ್ಲ್ಯಾಪ್ ಥೆರಪಿಗಾಗಿ ಸ್ಲ್ಯಾಪ್ಗಳನ್ನು ಬಳಸಲಾಗುತ್ತದೆ. ಇದನ್ನು ಕನ್ನಡದಲ್ಲಿ ಬಡಿಯುವ ಚಿಕಿತ್ಸೆ ಎಂದೂ ಕರೆಯುತ್ತಾರೆ. ಈ ಚಿಕಿತ್ಸಾ ಕ್ರಮದಲ್ಲಿ ಮುಖದ ಎಲ್ಲಾ ಭಾಗಗಳಿಗೂ ಹಗುರವಾದ ಕೈಗಳಿಂದ ಹೊಡೆಯಲಾಗುತ್ತದೆ. ಮುಖದ ಮೇಲೆ ಬಡಿಯುವುದರಿಂದ ರಕ್ತ ಸಂಚಾರ ಸರಿಯಾಗಿ ಆಗಲು ತುಂಬಾ ಸಹಾಯವಾಗುತ್ತದೆ. ಅಷ್ಟೇ ಅಲ್ಲ, ಇದರ ಸಹಾಯದಿಂದ ಮುಖದಲ್ಲಿ ಆಗುವ ಹಲವಾರು ರೀತಿಯ ಸಮಸ್ಯೆಗಳೂ ನಿವಾರಣೆಯಾಗುತ್ತವೆ. ಈ ಕಾರಣಕ್ಕಾಗಿಯೇ ಇತ್ತೀಚಿನ ದಿನಗಳಲ್ಲಿ ಪ್ರಪಂಚದಾದ್ಯಂತದ ಹೆಚ್ಚಿನ ಮಹಿಳೆಯರು ತಮ್ಮ ಸೌಂದರ್ಯವನ್ನು ಹೆಚ್ಚಿಸಲು ಈ ಚಿಕಿತ್ಸೆಯನ್ನು ಬಳಸುತ್ತಿದ್ದಾರೆ.
ಸ್ಲ್ಯಾಪ್ ಥೆರಪಿ ಹಲವು ವರ್ಷಗಳ ಹಿಂದೆ ಕೊರಿಯಾದಲ್ಲಿ ಮೊದಲು ಹುಟ್ಟಿಕೊಂಡಿತು. ತಮ್ಮ ಮುಖದ ಚರ್ಮವನ್ನು ಮೃದು ಮತ್ತು ಹೊಳೆಯುವಂತೆ ಮಾಡಲು, ಕೊರಿಯಾ ಮತ್ತು ಅಮೆರಿಕದ ಮಹಿಳೆಯರು ನಿರಂತರವಾಗಿ ಸ್ಲ್ಯಾಪ್ ಥೆರಪಿಯನ್ನು ಬಳಸುತ್ತಿದ್ದರು. ಈಗ ಈ ಚಿಕಿತ್ಸೆಯು ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ.
* ಈ ಚಿಕಿತ್ಸೆಗಾಗಿ, ನೀವು ಹಗುರವಾದ ಕೈಗಳಿಂದ ನಿಮ್ಮ ಮುಖದ ಮೇಲೆ ನಿತ್ಯ 50 ಬಾರಿ ಬಡಿಯಬೇಕು.
* ಬಡಿಯುವ ವೇಗ ಬಹಳ ಹಿತವಾಗಿರಬೇಕು, ನೋವಾಗದಂತಿರಲಿ.
* ಮುಖ ಎಲ್ಲಾ ಭಾಗಗಳಿಗೂ ಸಮವಾಗಿ ಬಡಿಯಬೇಕು. ಇದು ರಕ್ತಸ ಸಂಚಾರಕ್ಕರ ಸಹಕಾರಿ.