ಕೋಝಿಕ್ಕೋಡ್: ಪ್ಲಸ್ ಟು ವಿದ್ಯಾರ್ಥಿನಿ ಎಂಬಿಬಿಎಸ್ ತರಗತಿಯಲ್ಲಿ ನಾಲ್ಕು ದಿನ ಕುಳಿತ ಘಟನೆ ನಡೆದಿದೆ. ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಈ ಘಟನೆ ನಡೆದಿದೆ.
ನಾಲ್ಕಾರು ದಿನ ತರಗತಿಯಲ್ಲಿದ್ದರೂ ಯಾರಿಗೂ ಗುರುತು ಸಿಕ್ಕಿರÀಲಿಲ್ಲ. ವಿದ್ಯಾರ್ಥಿನಿ ಮಲಪ್ಪುರಂ ಮೂಲದವರು.
ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ನವೆಂಬರ್ 29 ರಂದು ತರಗತಿ ಪ್ರಾರಂಭವಾಗಿತ್ತು. 245 ಮಂದಿ ಪ್ರವೇಶ ಪಡೆದಿದ್ದರು. ಈ ವಿದ್ಯಾರ್ಥಿಗಳೊಂದಿಗೆ ಬಾಲಕಿ ನುಸುಳಿದ್ದಳು. ಐದನೇ ದಿನವೂ ವಿದ್ಯಾರ್ಥಿನಿ ತರಗತಿಗೆ ಗೈರು ಹಾಜರಾಗಿದ್ದು ಅಧಿಕಾರಿಗಳ ಗಮನಕ್ಕೆ ಬಂದಿದೆ.
ಪ್ರವೇಶ ಪರೀಕ್ಷೆಯಲ್ಲೂ ಅರ್ಹತೆ ಪಡೆಯದ ವಿದ್ಯಾರ್ಥಿನಿಯಾಗಿದದಳು. ಪ್ರವೇಶ ಪಟ್ಟಿಯಲ್ಲಿ ವಿದ್ಯಾರ್ಥಿನಿಯ ಹೆಸರು ಇಲ್ಲದಿದ್ದರೂ ಹಾಜರಾತಿ ಪಟ್ಟಿಯಲ್ಲಿ ಹೆಸರು ದಾಖಲಾಗಿದೆ. ಪ್ರಾಂಶುಪಾಲರು ನೀಡಿದ ದೂರಿನ ಮೇರೆಗೆ ಪೆÇಲೀಸರು ತನಿಖೆ ಆರಂಭಿಸಿದ್ದಾರೆ.
ಎಂ.ಬಿ.ಬಿ.ಎಸ್. ತರಗತಿಯಲ್ಲಿ ಪ್ಲಸ್ ಟು ವಿದ್ಯಾರ್ಥಿನಿ: ನಾಲ್ಕು ದಿನಗಳ ನಂತರ ಅಧಿಕಾರಿಗಳ ಗಮನಕ್ಕೆ: ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಘಟನೆ: ತನಿಖೆ ಆರಂಭ
0
ಡಿಸೆಂಬರ್ 09, 2022