ಮಧೂರು: ಕ್ಯಾನ್ಸರ್ ನಿಯಂತ್ರಣದ ಅಂಗವಾಗಿ ಕುಟುಂಬ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಮಧೂರು ಪಂಚಾಯಿತಿ ಮಟ್ಟದ ತರಬೇತಿ ತರಗತಿ ನಡೆಯಿತು. ಉಳಿಯತ್ತಡ್ಕ ಅಟಲ್ ಜಿ ಸಭಾಂಗಣದಲ್ಲಿ ಮಧೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಗೋಪಾಲಕೃಷ್ಣ ಉದ್ಘಾಟಿಸಿದರು. ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ ಗಟ್ಟಿ ಉಳಿಯ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಮೇಲ್ವಿಚಾರಕ ಬಿ.ಅಶ್ರಫ್ ಹಾಗೂ ಕಿರಿಯ ಆರೋಗ್ಯ ನಿರೀಕ್ಷಕ ಕೆ.ಎಂ.ಮೋಹನನ್ ತರಗತಿ ನಡೆಸಿದರು. ಪಂಚಾಯಿತಿ ಸದಸ್ಯರಾದ ಸಿ.ಎಚ್.ಉದಯಕುಮಾರ್, ಹಬೀಬ್ ಚೆಟ್ಟುಂಗುಳಿ, ಹನೀಫ ಅರಂತೋಡು, ಆರೋಗ್ಯ ನಿರೀಕ್ಷಕ ನಿಶಾಮೋಳ್, ಕಿರಿಯ ಆರೋಗ್ಯ ನಿರೀಕ್ಷಕ ಎಸ್.ಜಿ.ರಾಬಿನ್ಸನ್, ಎಂ.ಜಮ್ಜೀಲ್, ಕೆ.ಕೆ.ಆದರ್ಶ, ಶಾಂತಾ, ಶಾನಾ, ಜಿನ್ಸಿ, ಸಬೀನಾ ಮಾತನಾಡಿದರು.
ಜನಪ್ರತಿನಿಧಿಗಳು, ಆರೋಗ್ಯ ಕಾರ್ಯಕರ್ತರು, ಆಶಾ, ಕುಟುಂಬಶ್ರೀ ಸಿಡಿಎಸ್ ಹಾಗೂ ಎಡಿಎಸ್ ಕಾರ್ಯಕರ್ತರಿಗೆ ತರಬೇತಿ ನೀಡಲಾಗುತ್ತದೆ. ಪಂಚಾಯಿತಿ ವ್ಯಾಪ್ತಿಯ 20 ವಾರ್ಡ್ ಗಳಲ್ಲಿ ಪಂಚಾಯಿತಿ ಸದಸ್ಯರ ನೇತೃತ್ವದಲ್ಲಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಜಾಗೃತಿ ಮೂಡಿಸಿ ಹೈ ರಿಸ್ಕ್ ಗುಂಪುಗಳ ಪಟ್ಟಿ ತಯಾರಿಸಿ ತಪಾಸಣೆ ನಡೆಸಲಾಗುವುದು. ರೋಗ ಲಕ್ಷಣ ಇರುವವರನ್ನು ವೈದ್ಯಕೀಯ ಶಿಬಿರದಲ್ಲಿ ತಪಾಸಣೆಗೊಳಪಡಿಸಿ ರೋಗವನ್ನು ಮೊದಲೇ ಪತ್ತೆ ಹಚ್ಚಿ ಚಿಕಿತ್ಸೆ ನೀಡಲಾಗುವುದು. ಈಗಾಗಲೇ ಜಿಲ್ಲೆಯ ಹಲವೆಡೆ ಈ ಶಿಬಿರ ನಡೆಯುತ್ತಿದೆ.
ಮಧೂರಲ್ಲಿ ಕ್ಯಾನ್ಸರ್ ನಿಯಂತ್ರಣ, ತರಬೇತಿ
0
ಡಿಸೆಂಬರ್ 16, 2022