ಕಾಸರಗೋಡು: ರಾಜ್ಯ ಮುಖ್ಯ ಕಾರ್ಯದರ್ಶಿ ಹಾಗೂ ಬೇಕಲ ರೆಸಾರ್ಟ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ವಿ.ಪಿ. ಜಾಯ್ ಬೇಕಲ್ ಯೋಜನಾ ಪ್ರದೇಶಕ್ಕೆ ಭೇಟಿ ನೀಡಿದರು. ಬಿಆರ್‍ಡಿಸಿ ಮೇಲ್ನೋಟದಲ್ಲಿ ಪೂರ್ಣಗೊಂಡ ತಾಜ್ ಬೇಕಲ್ ರೆಸಾರ್ಟ್ ಮತ್ತು ಸ್ಪಾ ಹಾಗೂ ಲಲಿತ್ ರೆಸಾರ್ಟ್ ಮತ್ತು ಸ್ಪಾಗೆ ಭೇಟಿ ನೀಡಿ ಅಧಿಕಾರಿಗಳ:ಒಂದಿಗೆ ಸಮಾಲೋಚನೆ ನಡೆಸಿದರು. ಜತೆಗೆ ಮಲಾಂಕುನ್ನಿನಲ್ಲಿ ನಿರ್ಮಾಣ ಹಂತದಲ್ಲಿರುವ ಹೋಟೆಲ್ ಗ್ಲೋಬ್ ಲಿಂಕ್ ಮತ್ತು ಬೇಕಲ್ ಬೀಚ್ ಪಾರ್ಕ್‍ಗೆ ಭೇಟಿ ನೀಡಿದರು. ಬಿಆರ್‍ಡಿಸಿ ಮಹಾನಿರ್ದೇಶಕ ಶಿಜಿನ್ ಪಿ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಬೇಕಲ ರೆಸಾರ್ಟ್‍ಗೆ ರಾಜ್ಯ ಮುಖ್ಯ ಕಾರ್ಯದರ್ಶಿ ಭೇಟಿ: ಪ್ರಗತಿ ಪರಿಶೀಲನೆ
0
ಡಿಸೆಂಬರ್ 07, 2022