ಕಾಸರಗೋಡು: ಕೇರಳ ಗ್ರಂಥಾಲಯ ಕೌನ್ಸಿಲ್ ವತಿಯಿಂದ ಮಾದಕ ದ್ರವ್ಯ ಹಾಗೂ ಅಂಧ ವಿಶ್ವಾಸ ವಿರುದ್ಧ ಜನ ಚೇತನ ಯಾತ್ರೆ ಡಿ. 22ರಂದು ಮಧ್ಯಾಹ್ನ 3ಕ್ಕೆ ಮಂಜೇಶ್ವರ ಗೋವಿಂದ ಪ್ಯ ಸಮಾರಕ'ಗಿಳಿವಿಂಡು'ವಿನಿಂದ ಅರಂಭಗೊಳ್ಳಲಿರುವುದಾಗಿ ಲೈಬ್ರರಿ ಕೌನ್ಸಿಲ್ ರಜ್ಯ ಸಮಿತಿ ಸದಸ್ಯ ಪಿ.ವಿ.ಕೆ ಪನಯಾಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಖ್ಯಾತ ಸಿನಿಮಾ ನಿರ್ದೇಶಕ ಶಾಜಿ ಎನ್. ಕರುಣ್ ಧ್ವಜ ಹಸ್ತಾಂತರಿಸುವ ಮೂಲಕ ಜಾಥಾಕ್ಕೆ ಚಾಲನೆ ನೀಡುವರು. ಮಾಜಿ ಶಾಸಕ ಜಿಲ್ಲ ಲೈಬ್ರರಿ ಕೌನ್ಸಿಲ್ ಅಧ್ಯಕ್ಷ ಕೆ.ವಿ ಕುಞÂರಾಮನ್ ಅದ್ಯಕ್ಷತೆ ವಹಿಸುವರು. ಶಾಸಕ ಎ.ಕೆ.ಎಂ ಅಶ್ರಫ್ ಜಾಥಾ ಸದಸ್ಯರನ್ನು ಅಭಿನಂದಿಸುವರು. ನ್ಯಾಶನಲ್ ಸ್ಕೂಲ್ ಆಫ್ ಡ್ರಾಮಾ ಮಾಜಿ ನಿರ್ದೇಶಕ ಬಸವಲಿಂಗಯ್ಯ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಪ್ರ. ಎಂ.ಎಂ ನಾರಾಯಣನ್ ಮುಖ್ಯ ಭಾಷಣ ಮಡುವರು. ಕೇರಳ ತುಳು ಅಕಾಡಮಿ ಅಧ್ಯಕ್ಷ ಕೆ.ಆರ್. ಜಯಾನಂದ ಮಂಜೇಶ್ವರ ಗೋವಿಂದ ಪೈ ಸಂಸ್ಮರಣೆ ನಡೆಸುವರು. ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ಸಂಚರಿಸಲಿರುವ ಜಾಥಾ ಡಿ. 23ರಂದು ಸಂಜೆ ಕಣ್ಣೂರು ಜಿಲ್ಲೆ ಪ್ರವೇಶಿಸಲಿರುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಭಾಕರನ್, ಟಿ. ದಮೋದರನ್, ಡಿ. ಕಮಲಾಕ್ಷ, ಹುಸೈನ್ ಮಾಸ್ಟರ್ ಉಪಸ್ಥಿತರಿದ್ದರು.
ಕೇರಳ ಗ್ರಂಥಾಲಯ ಕೌನ್ಸಿಲ್ ವತಿಯಿಂದ ಜನ ಚೇತನ ಯಾತ್ರೆ: ಮಂಜೇಶ್ವರ ಗಿಳಿವಿಂಡಿನಿಂದ ಇಂದು ಚಾಲನೆ
0
ಡಿಸೆಂಬರ್ 21, 2022
Tags