ಕಾಸರಗೋಡು: ಪ್ರಧಾನ ಮಂತ್ರಿ ಮತ್ಸ್ಯ ಸಂಪದ(ಪಿಎಂಎಂಎಸ್) ಯೋಜನೆಯ ಅಧೀನದಲ್ಲಿ, ಕೇರಳದಲ್ಲಿ ಮೀನುಗಾರಿಕಾ ಇಲಾಖೆ ಜಾರಿಗೊಳಿಸುವ ಸಾಗರಮಿತ್ರ ಯೋಜನೆಯಲ್ಲಿ ಕಾಸರಗೋಡಿನಲ್ಲಿ ಗುತ್ತಿಗೆ ಆಧಾರದ ಮೇಲೆ 2 ಸಾಗರಮಿತ್ರ ಹುದ್ದೆಗಳಿಗೆ ನೇಮಕಾತಿ ನಡೆಯಲಿರುವುದು.
ಮಾಸಿಕ 15,000 ಪೆÇ್ರೀತ್ಸಾಹಧನ ಲಭ್ಯವಿದ್ದು, ಮೀನುಗಾರಿಕೆ ವಿಜ್ಞಾನ ಯಾ ಸಾಗರ ಜೀವಶಾಸ್ತ್ರ ಅಥವಾ ಪ್ರಾಣಿಶಾಸ್ತ್ರ ವಿಷಯಗಳಲ್ಲಿ ಪದವಿ ಪಡೆದ ಮೀನುಗಾರಿಕಾ ವೃತ್ತಿಪರರು, ಸ್ಥಳೀಯ ಭಾಷೆಗಳಲ್ಲಿ ವ್ಯವಹರಿಸುವ ಸಾಮಥ್ರ್ಯ ಮತ್ತು ಕಂಪ್ಯೂಟರ್ ಪರಿಜ್ಞಾನವನ್ನು ಹೊಂದಿರುವವರು ಅರ್ಹರಾಗಿರುತ್ತಾರೆ. ಅಭ್ಯರ್ಥಿಗಳು ಮೀನುಗಾರಿಕಾ ಗ್ರಾಮ ಅಥವಾ ಸಮೀಪ ಪ್ರದೇಶದಲ್ಲಿ ವಾಸಿಸುವವರಾಗಿದ್ದು, ವಯಸ್ಸು 35 ವರ್ಷ ಮೀರಿರಬಾರದು. ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 19 ರಂದು ಬೆಳಗ್ಗೆ 11ಕ್ಕೆ ಕಾಞಂಗಾಡ್ ಮೀನುಗಾರಿಕಾ ಉಪನಿರ್ದೇಶಕರ ಕಛೇರಿಯಲ್ಲಿ ಅರ್ಜಿ, ಅರ್ಹತಾ ಪ್ರಮಾಣಪತ್ರ (ನಕಲು ಪ್ರತಿ ಸೇರಿದಂತೆ) ಮತ್ತು ಪಾಸ್‍ಪೆÇೀರ್ಟ್ ಅಳತೆಯ ಭಾವಚಿತ್ರದೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ(04672202537.)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಸಾಗರಮಿತ್ರ ತೆರವಾದ ಹುದ್ದೆ ನೇಮಕಾತಿಗೆ ಸಂದರ್ಶನ
0
ಡಿಸೆಂಬರ್ 17, 2022
Tags