ಮುಳ್ಳೇರಿಯ: ಕ್ಯಾನ್ಸರ್ ನಿಯಂತ್ರಣದ ಅಂಗವಾಗಿ ಬೆಳ್ಳೂರಿನ ಕುಟುಂಬ ಆರೋಗ್ಯ ಕೇಂದ್ರದ ಮುಂಭಾಗದಲ್ಲಿ ಪಂಚಾಯತಿ ಮಟ್ಟದ ತರಬೇತಿ ಕಾರ್ಯಕ್ರಮ ನಡೆಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಶ್ರೀಧರ ಉದ್ಘಾಟಿಸಿದರು. ಜನಪ್ರತಿನಿಧಿಗಳು, ಆರೋಗ್ಯ ಕಾರ್ಯಕರ್ತರು, ಆಶಾ, ಕುಟುಂಬಶ್ರೀ ಸಿಡಿಎಸ್ ಹಾಗೂ ಎಡಿಎಸ್ ಕಾರ್ಯಕರ್ತರಿಗೆ ತರಬೇತಿ ನೀಡಲಾಯಿತು. ಪಂಚಾಯಿತಿ ವ್ಯಾಪ್ತಿಯ 13 ವಾರ್ಡ್‍ಗಳಲ್ಲಿ ಪಂಚಾಯಿತಿ ಸದಸ್ಯರ ನೇತೃತ್ವದಲ್ಲಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಜಾಗೃತಿ ಮೂಡಿಸಿ ರೋಗಕ್ಕೆ ತುತ್ತಾಗುವವರನ್ನು ಗುರುತಿಸಲು ತಪಾಸಣೆ ನಡೆಸಲಾಗುವುದು. ರೋಗ ಲಕ್ಷಣ ಇರುವವರನ್ನು ವೈದ್ಯಕೀಯ ಶಿಬಿರದಲ್ಲಿ ತಪಾಸಣೆಗೊಳಪಡಿಸಿ ರೋಗಿಗಳನ್ನು ಮೊದಲೇ ಪತ್ತೆ ಹಚ್ಚಿ ಚಿಕಿತ್ಸೆ ನೀಡಲಾಗುವುದು.
ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಮೇಲ್ವಿಚಾರಕ ಬಿ.ಅಶ್ರಫ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸುಜಾತಾ ಎಂ.ರೈ, ಚಂದ್ರಶೇಖರ ರೈ, ಎಂ.ಶ್ರೀಪತಿ, ಪಂಚಾಯಿತಿ ಸದಸ್ಯೆ ಬಿ.ಎನ್.ಗೀತಾ, ವೈದ್ಯಾಧಿಕಾರಿ ಶ್ರೀಷ್ಮಾ ವರ್ಗೀಸ್, ಕಿರಿಯ ಆರೋಗ್ಯ ನಿರೀಕ್ಷಕ ಎನ್.ತಿರುಮಲೇಶ್ವರ, ಜೆಪಿಎಚ್‍ಎನ್ ಮಾರಯ್ಯ ಎ.ಜಿ.ಲೀನಾ, ಎನ್.ಶೈಜಾ ಮಾತನಾಡಿದರು.
ಕ್ಯಾನ್ಸರ್ ನಿಯಂತ್ರಣ ಕಾರ್ಯಕ್ರಮ: ಬೆಳ್ಳೂರು ಪಂಚಾಯತಿಯಲ್ಲಿ ತರಬೇತಿ
0
ಡಿಸೆಂಬರ್ 06, 2022
Tags