ನವದೆಹಲಿ: ಪಠ್ಯಪುಸ್ತಕಗಳಲ್ಲಿ ಹಾಗೂ ಹೊಸ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನಲ್ಲಿ (ಎನ್‌ಸಿಎಫ್) ಲಿಂಗಸಮಾನತೆ ದೃಷ್ಟಿಕೋನ ತರುವ ಕುರಿತು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನಾ ಹಾಗೂ ತರಬೇತಿ ಮಂಡಳಿಯು (ಎನ್‌ಸಿಆರ್‌ಟಿ) ಕಾರ್ಯಪ್ರವೃತ್ತವಾಗಿದೆ.
ಸಂಸದೀಯ ಸಮಿತಿಯು ತನ್ನ ಶಿಫಾರಸುಗಳನ್ನು ಸೋಮವಾರ ಸಂಸತ್ತಿನ ಮುಂದಿಟ್ಟಿತ್ತು.
ಶಾಲಾ ಪಠ್ಯಪುಸ್ತಕಗಳಲ್ಲಿ ಮಹಿಳೆ ಹಾಗೂ ಹುಡುಗಿಯರನ್ನು ಸಾಂಪ್ರದಾಯಿಕ ರೀತಿಯಲ್ಲಿಯೇ ಈವರೆಗೂ ತೋರಿಸಲಾಗಿದೆ. ಆದ್ದರಿಂದ ಲಿಂಗ ಅಸಮಾನತೆ ಹಾಗೂ ಸ್ಟೀರಿಯೋಟೈಪ್ ಆಲೋಚನೆಗಳ ದೃಷ್ಟಿಕೋನದಿಂದ ಪಠ್ಯಕ್ರಮವನ್ನು ಪರಾಮರ್ಶಿಸಬೇಕು ಎಂದು ಸಮಿತಿಯು ಎನ್‌ಸಿಆರ್‌ಟಿಗೆ ಶಿಫಾರಸು ಮಾಡಿತ್ತು.
ಪಠ್ಯಪುಸ್ತಕಗಳಲ್ಲಿನ ಮುದ್ರಿತವಾಗುವ ಚಿತ್ರಗಳಲ್ಲೂ ಲಿಂಗಸಮಾನತೆ ಇರಬೇಕು ಎಂದೂ ಸಮಿತಿ ಹೇಳಿದೆ.