ತಿರುವನಂತಪುರಂ: ಪೂವಾರ್ ಕೆಎಸ್‍ಆರ್‍ಟಿಸಿ ಡಿಪೆÇೀದಲ್ಲಿ ಪ್ಲಸ್ ಒನ್ ವಿದ್ಯಾರ್ಥಿಗೆ ಕೆಎಸ್‍ಆರ್‍ಟಿಸಿ ಉದ್ಯೋಗಿ ಥಳಿಸಿದ ಘಟನೆ ನಡೆದಿದೆ. ಅರುಮನೂರ್ ಶಾಲೆಯ ಪ್ಲಸ್ ಒನ್ ವಿದ್ಯಾರ್ಥಿ ಶಾನುವಿಗೆ ಥಳಿಸಲಾಗಿದೆ.
ಬಾಲಕಿಯರ ಜತೆ ಮಾತನಾಡಿದ್ದಾನೆ ಎಂದು ಆರೋಪಿಸಿ ಥಳಿಸಿದ್ದಾರೆ ಎಂದು ವಿದ್ಯಾರ್ಥಿ ಹೇಳಿದ್ದಾನೆ. ಅಂಗಿ ಹರಿದಿರುವ ದೂರು ಕೂಡ ಇದೆ. ಕೆಎಸ್‍ಆರ್‍ಟಿಸಿ ನಿಯಂತ್ರಣ ನಿರೀಕ್ಷಕ ಸುನೀಲ್ ವಿರುದ್ಧ ದೂರು ದಾಖಲಾಗಿದೆ.
ವಿದ್ಯಾರ್ಥಿ ಪೊಜ್ಜಿಯೂರಿನವನು. ಕ್ರಿಸ್‍ಮಸ್ ಆಚರಣೆಗೆ ಕೇಕ್ ಖರೀದಿಸಲು ಬಂದಿದ್ದೆ ಎಂದು ವಿದ್ಯಾರ್ಥಿ ಪೋಲೀಸರಿಗೆ ತಿಳಿಸಿದ್ದಾನೆ. ವಿದ್ಯಾರ್ಥಿಗೆ ಥಳಿಸಿದ್ದನ್ನು ಕಂಡು ಡಿಪೆÇೀದಲ್ಲಿದ್ದ ಕೆಲವರು ಪ್ರಶ್ನಿಸಿದ್ದರು. ಆದರೆ ಹುಡುಗ ಹುಡುಗಿಯರು ಸಂವಾದ ನಡೆಸುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದರಿಂದ ಮಧ್ಯಪ್ರವೇಶಿಸಿದ್ದೇನೆ ಎಂಬುದು ಸುನೀಲ್ ಅವರ ವಿವರಣೆ.
ಇದೇ ವೇಳೆ ಶಾನುವಿಗೆ ವಿನಾಕಾರಣ ಥಳಿಸಿದ್ದಾರೆ ಎಂದು ಜತೆಗಿದ್ದ ಸಹಪಾಠಿಗಳು ಹೇಳುತ್ತಾರೆ. ವಿದ್ಯಾರ್ಥಿ ಹಾಗೂ ಪ್ರತ್ಯಕ್ಷದರ್ಶಿಗಳ ವಿವರವಾದ ಹೇಳಿಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಪೂವಾರ್ ಠಾಣೆ ಪೆÇಲೀಸರು ತಿಳಿಸಿದ್ದಾರೆ.
ನಿನ್ನೆ ತಿರುವನಂತಪುರದ ವೆಲ್ಲರಾದದಲ್ಲಿ ಕೆಎಸ್‍ಆರ್‍ಟಿಸಿ ಕಂಡಕ್ಟರ್ ಪ್ಲಸ್ ಒನ್ ವಿದ್ಯಾರ್ಥಿಗೆ ಥಳಿಸಿದ್ದಾರೆ ಎಂಬ ದೂರು ದಾಖಲಾಗಿತ್ತು. ವೆಳ್ಳಾರಟ ನಿವಾಸಿ, ಅಮರವಿಳ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ಒನ್ ವಿದ್ಯಾರ್ಥಿ ಅಭಿನ್ ರಾಜೇಶ್ (16) ಗೆ ಥಳಿಸಲಾಗಿತ್ತು. ಎದೆ ಹಾಗೂ ಮುಖಕ್ಕೆ ಪೆಟ್ಟು ಬಿದ್ದಿರುವ ವಿದ್ಯಾರ್ಥಿ ವೆಲ್ಲರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದಾನೆ. ವೆಲ್ಲರಾದ ಡಿಪೆÇೀದ ಕಂಡಕ್ಟರ್ ಮಾನತೋಟ್ಟಂ ನಿವಾಸಿ ಆನಂದ್ ವಿರುದ್ಧ ವಿದ್ಯಾರ್ಥಿಯ ತಂದೆ ರಾಜೇಶ್ ವೆಲ್ಲರದ ಪೆÇಲೀಸರಿಗೆ ದೂರು ನೀಡಿದ್ದಾರೆ.
ಹುಡುಗಿಯರೊಂದಿಗೆ ಮಾತನಾಡಿದ್ದಕ್ಕೆ ಪ್ಲಸ್ ವನ್ ವಿದ್ಯಾರ್ಥಿಗೆ ಥಳಿಸಿದ ಕಂಡಕ್ಟರ್
0
ಡಿಸೆಂಬರ್ 21, 2022