HEALTH TIPS

ಹಿಮಾಚಲ: ತೀವ್ರ ಹಿಮಪಾತದಿಂದ ಅಟಲ್‌ ಸುರಂಗದಲ್ಲಿ ಸಿಲುಕಿದ್ದ ಪ್ರವಾಸಿಗರ ರಕ್ಷಣೆ

 

              ಶಿಮ್ಲಾ: 'ತೀವ್ರ ಹಿಮಪಾತದಿಂದಾಗಿ ಅಟಲ್‌ ಸುರಂಗದಲ್ಲಿ 400 ವಾಹನಗಳಲ್ಲಿ ಸಿಲುಕಿಕೊಂಡಿದ್ದ ಪ್ರವಾಸಿಗರನ್ನು ರಕ್ಷಿಸಲಾಗಿದೆ' ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದರು.

                ಮಹಾಲಿ-ಲೇಹ್‌ ‍ಹೆದ್ದಾರಿ ಪ್ರದೇಶದಲ್ಲಿರುವ ಸುರಂಗದ ಪ್ರದೇಶದಲ್ಲಿ ಗುರುವಾರ ಹೆಚ್ಚಿನ ಪ್ರಮಾಣದ ಹಿಮಪಾತ ಉಂಟಾಗಿತ್ತು.

                 ಈ ಕಾರಣದಿಂದಾಗಿ ರಸ್ತೆಗಳು ಜಾರುತ್ತಿದ್ದವು, ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.

                    ಕೆಲಾಂಗ್‌ ಹಾಗೂ ಮನಾಲಿ ಪೊಲೀಸ್‌ ತಂಡಗಳು ರಕ್ಷಣಾ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದವು. 10-12 ತಾಸುಗಳ ರಕ್ಷಣಾ ಕಾರ್ಯಚರಣೆಯು ಶುಕ್ರವಾರ ಬೆಳಗಿನ ಜಾವ 4ಕ್ಕೆ ಮುಕ್ತಾಯಗೊಂಡಿತು ಎಂದು ಮಾಹಿತಿ ನೀಡಿದರು.

                 ಈ ಎಲ್ಲದರ ಮಧ್ಯೆ ಸುರಂಗದಲ್ಲಿ ಸಿಲುಕಿದ್ದ ಪ್ರವಾಸಿಗರು ಹಿಮಪಾತವನ್ನು ಸಂಭ್ರಮಿಸುತ್ತಿದ್ದರು. ಈ ಎಲ್ಲರಿಗೂ ಆಹಾರದ ವ್ಯವಸ್ಥೆ ಮಾಡಲಾಗಿತ್ತು.

              ಹೊಸ ವರ್ಷದ ಸಂಭ್ರಮಾಚರಣೆಗಾಗಿ ದೊಡ್ಡ ಸಂಖ್ಯೆಯ ಪ್ರವಾಸಿಗರು ಕುಲ್ಲು ಹಾಗೂ ಮನಾಲಿಗೆ ಬರುತ್ತಿದ್ದಾರೆ. ಹೀಗೆ ಬರುವ ಪ್ರವಾಸಿಗರಿಗೆ ನಿಧಾನವಾಗಿ ವಾಹನ ಚಲಾಯಿಸುವಂತೆ ಜಿಲ್ಲಾಧಿಕಾರಿ ಆಶುತೋಷ್‌ ಗಾರ್ಗ್‌ ಅವರು ಮನವಿ ಮಾಡಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries