HEALTH TIPS

ಕೊಚ್ಚಿಯಲ್ಲಿ ಈ ಅದ್ಭುತವನ್ನು ಉದ್ಘಾಟಿಸಲು ಪ್ರಧಾನಿಯ ನಿರೀಕ್ಷೆಯಲ್ಲಿ: ನರೇಂದ್ರ ಮೋದಿ ಶೀಘ್ರ ಕೇರಳಕ್ಕೆ


            ಕೊಚ್ಚಿ: ಮೆಟ್ರೋ ರೈಲು ನಿಲ್ದಾಣದಂತೆಯೇ ವಿಶ್ವ ದರ್ಜೆಯ ದೋಣಿಗಳು ಮತ್ತು ಟರ್ಮಿನಲ್‍ಗಳು ಸಿದ್ದಗೊಂಡಿದೆ. ಅದು ಕೊಚ್ಚಿ ವಾಟರ್ ಮೆಟ್ರೋ.
          ವಾಟರ್ ಮೆಟ್ರೋ ಟರ್ಮಿನಲ್ ವಿಮಾನ ನಿಲ್ದಾಣದ ಟರ್ಮಿನಲ್ ಇದ್ದಂತೆ. ಮೆಟ್ರೋ ದೋಣಿಗಳು ಮಿಶ್ರ ರೀತಿಯವು. ಬ್ಯಾಟರಿ ಮತ್ತು ಡೀಸೆಲ್ ಜನರೇಟರ್‍ನಲ್ಲಿ ಚಲಿಸುತ್ತದೆ. ಎಸಿ ಇದೆ. ಬಾಗಿಲು ಸ್ವಯಂಚಾಲಿತವಾಗಿ ತೆರೆಯುತ್ತದೆ. ಎಂಜಿನ್ ಶಬ್ದವಿಲ್ಲ.  ವಿಶಾಲವಾದ ಗಾಜಿನ ಕಿಟಕಿಗಳ ಮೂಲಕ ಸರೋವರ ವೀಕ್ಷಣೆ ಮನಸೂರೆಗೊಳಿಸುವಂತದ್ದು.  ಸುಮಾರು 8 ಕೋಟಿ ರೂಪಾಯಿ ವೆಚ್ಚದ ಬೋಟ್ ನಲ್ಲಿ ಆಧುನಿಕ ಸೌಲಭ್ಯಗಳ ಕೊರತೆ ಇಲ್ಲ.
           ವಾಟರ್‍ಮೆಟ್ರೊ ಉದ್ಘಾಟನೆಗೆ ಸಿದ್ಧವಾಗಿ ತಿಂಗಳುಗಳೇ ಕಳೆದಿವೆ. ಪ್ರಧಾನಿಯವರ ನಿರೀಕ್ಷೆಯಿಂದ ವಿಳಂಬವಾಗಿದೆ. ಪ್ರಯೋಗಗಳ ನಂತರ ದೋಣಿಗಳು, ಐದು ಟರ್ಮಿನಲ್‍ಗಳು ಮತ್ತು ಸಿಬ್ಬಂದಿ ಸಿದ್ಧವಾಗಿವೆ. ಎರ್ನಾಕುಳಂ-ವೈಪಿನ್ ಮಾರ್ಗದಲ್ಲಿ ಉದ್ಘಾಟನೆಯಾಗಲಿದೆ. 2 ನೇ ಹಂತ ವೈಟಿಲ - ಕಾಕ್ಕನಾಡು.
          ಕ್ಯೂಆರ್ ಕೋಡ್ ಅಥವಾ ಕೊಚ್ಚಿ ಒನ್ ಕಾರ್ಡ್ ಹೊಂದಿರುವ ಟಿಕೆಟ್ ಬಳಸಬೇಕು. ಮೆಟ್ರೋ ಮತ್ತು ವಾಟರ್‍ಮೆಟ್ರೋ ಟಿಕೆಟ್‍ಗಳನ್ನು ಒಟ್ಟಿಗೆ ಖರೀದಿಸಬಹುದು. 100 ಜನರಿಗೆ ಏಕಕಾಲದಲ್ಲಿ ಸಂಚರಿಸಬಹುದಾದ ಬೋಟುಗಳು. ತೇಲುವ ಜೆಟ್ಟಿ ಮತ್ತು ಬೋಟ್ ಪ್ರವೇಶ ದ್ವಾರವೂ ಒಂದೇ ಮಟ್ಟದಲ್ಲಿವೆ. ನೆಗೆಯಬೇಕಾಗಿಲ್ಲ. ಶಿಶುಗಳಿಗೂ  ಸೇರಿದಂತೆ 110 ಲೈಫ್ ಜಾಕೆಟ್‍ಗಳು ಲಭ್ಯವಿರುತ್ತದೆ.
            ಭಾರತದ ಮೊದಲ ಅಲ್ಯೂಮಿನಿಯಂ ಪ್ರಯಾಣಿಕ ದೋಣಿಗಳನ್ನು ಕೊಚ್ಚಿ ಶಿಪ್‍ಯಾರ್ಡ್ ತಯಾರಿಸಿದೆ. ದೋಣಿಗಳ ಹೆಸರು ಎಝಿಮಲ, ವಿಝಿಂಜಂ, ಬೇಕಲ, ಬೇಪೂರ್ ಮತ್ತು ಮುಜಿರಿಸ್. ಪ್ರತಿ ಗಂಟೆಗೆ ಟಿಕೆಟ್ ಬೆಲೆ ನಿಶ್ಚಯಿಸಲಾಗುತ್ತದೆ. ಕೇವಲ 10-15 ನಿಮಿಷಗಳ ಟಿಕೆಟ್ ಗಳೂ ಇರಲಿವೆ.  ಭಾರತದ ಅತ್ಯುತ್ತಮ ಸೂಪರ್‍ಚಾರ್ಜಿಂಗ್ ಸ್ಟೇಷನ್‍ಗಳು ಹತ್ತು ಟರ್ಮಿನಲ್‍ಗಳಲ್ಲಿರುತ್ತವೆ. ಪ್ರಯಾಣದ ವಿವರ ಸ್ವಲ್ಪ ಬದಲಾದರೂ ವೈಟಿಲದಲ್ಲಿರುವ ನಿಯಂತ್ರಣ ಕೊಠಡಿ ನಿಮಗೆ ತಿಳಿಸುತ್ತದೆ. ದೋಣಿಗಳು ಥರ್ಮಲ್ ಕ್ಯಾಮೆರಾ ಮತ್ತು ಎಕೋ ಸೌಂಡರ್‍ನಂತಹ ವ್ಯವಸ್ಥೆಯನ್ನು ಹೊಂದಿವೆ.

       743 ಕೋಟಿ ವೆಚ್ಚದ ಯೋಜನೆಯು ಡಿಸೆಂಬರ್ 2019 ರೊಳಗೆ ಪೂರ್ಣಗೊಳ್ಳಬೇಕಿತ್ತು. ಇದು ಕೋವಿಡ್‍ನಿಂದ ವಿಳಂಬವಾಯಿತು. ಇದು 76 ಕಿಮೀ ವ್ಯಾಪಿಸಿರುವ 15 ಮಾರ್ಗಗಳನ್ನು ಹೊಂದಿದೆ ಮತ್ತು 10 ದ್ವೀಪಗಳನ್ನು ಒಳಗೊಂಡಂತೆ 38 ಟರ್ಮಿನಲ್‍ಗಳನ್ನು ಹೊಂದಿದೆ. ಐದು ಪೂರ್ಣಗೊಂಡಿದೆ. ನಾಲ್ಕು ಅಂತಿಮ ಹಂತದಲ್ಲಿವೆ.
                   ದೋಣಿಯ ವೈಶಿಷ್ಟ್ಯಗಳು

• ಆಸನಗಳು: 50

• ಪ್ರಯಾಣಿಕರು: 100

• ಉದ್ಯೋಗಿಗಳು: 3

• ದೋಣಿಯ ಬೆಲೆ: 7.6 ಕೋಟಿ

ಒಟ್ಟು 78 ದೋಣಿಗಳು

ವಾಟರ್‍ಮೆಟ್ರೊ ಸಂಪೂರ್ಣ ಕಾರ್ಯಾರಂಭಗೊಂಡರೆ 23 ದೊಡ್ಡ ದೋಣಿಗಳು ಮತ್ತು 55 ಸಣ್ಣ ದೋಣಿಗಳು ಇರುತ್ತವೆ.
           ಅಭಿಮತ:
           ಕೊಚ್ಚಿಯಲ್ಲಿರುವಂತಹ ವಾಟರ್‍ಮೆಟ್ರೋ ವಿಶ್ವದಲ್ಲೇ ಮೊದಲನೆಯದು.- ಸಜನ್ ಪಿ. ಜಾನ್ ಜನರಲ್ ಮ್ಯಾನೇಜರ್, ವಾಟರ್‍ಮೆಟ್ರೋ



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries