ಬದಿಯಡ್ಕ: ಏತಡ್ಕ ಕುಂಬ್ಡಾಜೆ ಗ್ರಾಮಸೇವಾ ಸಂಘ ಗ್ರಂಥಾಲಯದ ಆಶ್ರಯದಲ್ಲಿ ವಿಶ್ವ ಏಡ್ಸ್ ದಿನಾಚರಣೆಯನ್ನು ಗುರುವಾರ ಆಚರಿಸಲಾಯಿತು. ಗ್ರಂಥಾಲಯದ ಅಧ್ಯಕ್ಷ ವೈ.ವಿ. ಸುಬ್ರಹ್ಮಣ್ಯ ಅಧ್ಯಕ್ಷತೆಯನ್ನು ವಹಿಸಿದ್ದರು. ಡಾ. ಮೋಹನ್ ಕುಮಾರ್ ವೈ. ಎಸ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಏಡ್ಸ್‍ನ ಕುರಿತಾದ ಮಾಹಿತಿಯನ್ನು ನೀಡಿದರು. ನೈತಿಕತೆಯಿಂದ ಜೀವನ ನಡೆಸಿದಲ್ಲಿ ಏಡ್ಸ್‍ನಂತಹ ಕಾಯಿಲೆ ಬರಲಾದೆಂದು ಅವರು ಅಭಿಪ್ರಾಯಪಟ್ಟರು. ಡಾ ವೇಣುಗೋಪಾಲ ಕೆ. ಸ್ವಾಗತಿಸಿ, ವೈ.ಕೆ. ಗಣಪತಿ ಭಟ್ ವಂದಿಸಿದರು. ಕಾರ್ಯಕಾರೀ ಸಮಿತಿ ಸದಸ್ಯರು ಮತ್ತು ಇತರರು ಉಪಸ್ಥಿತರಿದ್ದರು.
ಏತಡ್ಕದಲ್ಲಿ ವಿಶ್ವ ಏಡ್ಸ್ ದಿನಾಚರಣೆ
0
ಡಿಸೆಂಬರ್ 04, 2022
Tags