ಪೆರ್ಲ: ಸ್ವರ್ಗ ಸ್ವಾಮಿ ವಿವೇಕಾನಂದ ಎಯುಪಿ ಶಾಲೆಯ ಮಕ್ಕಳಿ ಮೈಸೂರಿಗೆ ಎರಡು ದಿನದ ಶೈಕ್ಷಣಿಕ ಪ್ರವಾಸ ಕೈಗೊಂಡರು.
ಶುಕ್ರವಾರ ಬೆಳಗ್ಗೆ ಶ್ರೀ ಮಹಾಗಣಪತಿಯನ್ನು ಸ್ಮರಿಸಿ ಯಾತ್ರೆಗೆ ಚಾಲನೆ ನೀಡಲಾಯಿತು.ಮೊದಲು ವಿಜಯನಗರ ಅರಸರ ಆಳ್ವಿಕೆಯಲ್ಲಿ ನಿರ್ಮಿಸಲ್ಪಟ್ಟ ಶಿಲ್ಪಕಲಾ ದೇವಾಲಯ ಶ್ರೀರಂಗಪಟ್ಟಣದ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಲಾಯಿತು.
ಟಿಪ್ಪು ಕೋಟೆ ದರಿಯಾದೌಲತ್ ವೀಕ್ಷಿಸಲಾಯಿತು. ಅಲ್ಲಿಂದ ಮುಂದೆ ಸಾಗಿ ಕರ್ನಾಟಕದ ಪಕ್ಷಿ ಕಾಶಿ ಎಂದೇ ಪ್ರಸಿದ್ಧಿ ಪಡೆದ ರಂಗನತಿಟ್ಟು ಪಕ್ಷಿಧಾಮಕ್ಕೆ ತೆರಳಿ ಬೋಟಿಂಗ್ ಮೂಲಕ ಹಲವಾರು ದೇಶದ ವಿವಿಧ ರೀತಿಯ ವಲಸೆ ಪಕ್ಷಿಗಳನ್ನು ವೀಕ್ಷಿಸಲಾಯಿತು.ಸಂಜೆ ಬೃಂದಾವನ ಉದ್ಯಾನ ಮನಮೋಹಕ ಕಾರಂಜಿ ನೃತ್ಯ ಮಕ್ಕಳ ಮನ ಸೂರೆಗೊಳಿಸಿತು.
ಶನಿವಾರ ಬೆಳಗ್ಗೆ ಮಹಿμÁಸುರ ವಿಗ್ರಹ, ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯಲಾಯಿತು.ಅಲ್ಲಿಂದ ಬೋನ್ಸಾಯಿ ಹಾಗೂ ಸುಖವನದತ್ತ ಪ್ರಯಾಣಿಸಲಾಯಿತು.ಹೆಸರೇ ಸೂಚಿಸುವಂತೆ 400ಕ್ಕೂ ಅಧಿಕ ಜಾತಿಯ ವಿವಿಧ ಗಾತ್ರ, ಬಣ್ಣದ ಗಿಳಿಗಳು, ಸಿಂಹ, ಚಿರತೆ, ಕರಡಿ, ಜಿಂಕೆ, ಜೀರಾಫೆ, ಜೀಬ್ರಾ, ಆನೆ, ಕಾಡುಕೋಣ, ತೋಳ ಸಹಿತ ಸುಮಾರು ಎಕರೆ ಪ್ರದೇಶದಲ್ಲಿ ವಿಸ್ತೃತಗೊಂಡ ಮೃಗಾಲಯದಲ್ಲಿ ಹಲವಾರು ವಿಧದ ಪ್ರಾಣಿ ಪಕ್ಷಿಗಳನ್ನು ಪ್ರತ್ಯಕ್ಷವಾಗಿ ನೋಡಲಾಯಿತು.
ವ್ಯಾಕ್ಸ್ ಗ್ಯಾಲರಿಯಲ್ಲಿ ಸ್ವಾತಂತ್ರ್ಯ ಹೋರಾಟ, ಸಿನಿಮಾ, ಕ್ರೀಡೆ, ಸಾಮಾಜಿಕ ಸೇವೆ, ರಾಜರು ಇತ್ಯಾದಿ ನಾನಾ ಕ್ಷೇತ್ರಗಳಲ್ಲಿ ಸಾಧನೆಗೈದ ವ್ಯಕ್ತಿಗಳ ಮೇಣದ ಪ್ರತಿಮೆಯನ್ನು ನೋಡಿ ಎಲ್ಲರೂ ಬೆರಗಾದರು.ಅಲ್ಲಿಂದ ಮರಳು ಶಿಲ್ಪ ಸಂಗ್ರಹಾಲಯಕ್ಕೆ ತೆರಳಿ ವಿವಿಧ ಕಲಾ ಕೃತಿಗಳನ್ನು ವೀಕ್ಷಿಸಲಾಯಿತು. ಬಳಿಕ ಮೈಸೂರು ಅರಮನೆಯ ವೈಭವ, ದೀಪಾಲಂಕಾರ ವೀಕ್ಷಿಸಲಾಯಿತು.
ಅಡ್ಕಸ್ಥಳ ನಿವಾಸಿ ಜನಾರ್ದನ ರೈ ಮೈಸೂರು ಶಾಲಾ ಪ್ರವಾಸಕ್ಕೆ ಬೇಕಾದ ವ್ಯವಸ್ಥೆ ಮಾಡಿದ್ದಲ್ಲದೆ ಮಾರ್ಗದರ್ಶನ ನೀಡಿ ಸಹಕರಿಸಿದರು.ಶಾಲಾ ಶಿಕ್ಷಕ ಪದ್ಮನಾಭ, ಮಂಜುನಾಥ ಭಟ್ ನೇತೃತ್ವದಲ್ಲಿ ಮುಖ್ಯ ಶಿಕ್ಷಕಿ ಗೀತಾ ಕುಮಾರಿ, ಶಿಕ್ಷಕರು ಹಾಗೂ ರಕ್ಷಕ ಶಿಕ್ಷಕ ಸಂಘದ ಸಹಕಾರದಲ್ಲಿ ಶೈಕ್ಷಣಿಕ ಪ್ರವಾಸ ಯಶಸ್ವಿಯಾಯಿತು.
ಸ್ವರ್ಗ ಶಾಲಾ ಮಕ್ಕಳ ಶೈಕ್ಷಣಿಕ ಪ್ರವಾಸ
0
ಡಿಸೆಂಬರ್ 27, 2022
Tags