ಕಾಸರಗೋಡು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಛೇರಿಯ ಜಂಟಿ ಆಶ್ರಯದಲ್ಲಿ ಆರೆಂಜ್ ದಿ ವಲ್ರ್ಡ್ ಅಭಿಯಾನ ಕಾರ್ಯಕ್ರಮದ ಭಾಗವಾಗಿ ಪ್ರೌಢಶಾಲಾ ಹಾಗೂ ಹೈಯರ್ ಸೆಕೆಂಡರಿ ವಿದ್ಯಾರ್ಥಿಗಳಿಗೆ ಚಿತ್ರ ರಚನಾ ಸ್ಪರ್ಧೆ ನಡೆಸಲಾಯಿತು. ಜಿಲ್ಲಾ ಮಾಹಿತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲೆಯ 12 ಐಸಿಡಿಎಸ್ ವ್ಯಾಪ್ತಿಯಲ್ಲಿರುವ 12 ಮಕ್ಕಳು ಭಾಗವಹಿಸಿದ್ದರು. ಬಲ್ಲ ಈಸ್ಟ್ ಜಿಎಚ್‍ಎಸ್‍ಎಸ್ ನ ಎಂ.ಅಭಿನವ್ ಪ್ರಥಮ, ಎಡನೀರು ಜಿಎಚ್‍ಎಸ್‍ಎಸ್‍ನ ವೈಶಾಖ್ ರೈ ದ್ವಿತೀಯ ಮತ್ತು ಕುಂಬಳೆ ಜಿಎಚ್‍ಎಸ್‍ಎಸ್ ನ ಎ.ವಿ.ಅಶ್ಫಿದಾ ತೃತೀಯ ಸ್ಥಾನ ಪಡೆದರು. ವಿಜೇತರಿಗೆ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ಬಹುಮಾನ ವಿತರಿಸಿದರು. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ವಿ.ಎಸ್.ಶಿಮ್ನಾ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಾರ್ತಾಧಿಕಾರಿ ಎಂ.ಮಧುಸೂಧನನ್ ಮಾತನಾಡಿದರು.
'ಆರೆಂಜ್ ದಿ ವಲ್ರ್ಡ್' ಅಭಿಯಾನ ಚಿತ್ರಕಲಾ ಸ್ಪರ್ಧೆ
0
ಡಿಸೆಂಬರ್ 07, 2022
Tags