ಕಾಸರಗೋಡು: ಹೊನ್ನೆಮೂಲೆ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಅಷ್ಟ ಬಂಧ ಬ್ರಹ್ಮ ಕಲಶೋತ್ಸವ ಜ. 27ರಿಂದ ಫೆ. 2ರ ವರೆಗೆ ನಡೆಯಲಿದೆ.
ಅಷ್ಟಬಂಧ ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರದಲ್ಲಿ ಪ್ರತಿಷ್ಠಾಪಿಸಲಿರುವ ಶಿಲಾಪೀಠ ಸಹಿತ ಶಿವಲಿಂಗ, ಶಿಲಾಪೀಠ ಸಹಿತ ನಂದಿ, ನಾಗ ಶಿಲಾ ವಿಗ್ರಹ ಮತ್ತು ತುಳಸಿ ಕಟ್ಟೆ ಮುಂತಾದವುಗಳನ್ನು ಕ್ಷೇತ್ರಕ್ಕೆ ತಲುಪಿಸಲಾಯಿತು. ಶಿಲ್ಪಿ ಅಣ್ಣಪ್ಪ ಕಾರ್ಕಳ ಇವರು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಿರಂಜನ ಕೊರಕೋಡು ಇವರಿಗೆ ಹಸ್ತಾಂತರಿಸಿದರು.
ಟ್ರಸ್ಟಿನ ಅಧ್ಯಕ್ಷ ಡಾ. ಅನಂತ ಕಾಮತ್ ಬ್ರಹ್ಮ ಕಲಶೋತ್ಸವ ಗೌರವಧ್ಯಕ್ಷ ಬಾಬೂಜಿ ಭಟ್, ನಿರ್ಮಾಣ ಸಮಿತಿ ಅಧ್ಯಕ್ಷ ಗೋಪಾಲ ಹೊನ್ನೆಮೂಲೆ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಧ್ಯಕ್ಷ ವೆಂಕಟ್ರಮಣ ಹೊಳ್ಳ, ಪ್ರಧಾನ ಕಾರ್ಯದರ್ಶಿ ದಯಾನಂದ ಕೊಳ್ಕೆಬೈಲ್, ಕೋಶಾಧಿಕಾರಿ ದಿನೇಶ್ ನಾಗರಕಟ್ಟೆ, ಕ್ಷೇತ್ರ ಆನುವಂಶಿಕ ಮೊಕ್ತೇಸರರು ಲೋಕೇಶ್ ಅಣ0ಗೂರು, ಮಂಜುನಾಥ್ ದುಬೈ, ಕಮಲಾಕ್ಷ ಅಣ0ಗೂರು, ಲೋಹಿತಾಕ್ಷ ನಾಗರಕಟ್ಟೆ, ಪ್ರವೀಣ್ ಹೊನ್ನೆಮೂಲೆ, ಜೋಗಿಂದ್ರನಾಥ್ ವಿದ್ಯಾನಗರ, ಜಯಶೀಲಾ ಸಣ್ಣಕೂಡ್ಲು, ಸುಕೃತಿ ನೆಲ್ಲಿಕುಂಜೆ ರಾಧಾಕೃಷ್ಣ ಹೊನ್ನೆಮೂಲೆಉಪಸ್ಥಿತರಿದ್ದರು.
ಅಷ್ಟಬಂಧ ಬ್ರಹ್ಮಕಲಶೋತ್ಸವ ಶಿಲಾಪೀಠ ಸಹಿತ ವಿಗ್ರಹಗಳ ಹಸ್ತಾಂತರ
0
ಡಿಸೆಂಬರ್ 24, 2022
Tags