ಬದಿಯಡ್ಕ : ಕೇರಳದ ಕೆ.ನ್. ಪಣಿಕ್ಕರ್‍ರ ಕುತಂತ್ರದ ಫಲವಾಗಿ ಅಚ್ಚ ಕನ್ನಡಿಗರ ನಾಡಾದ ಕಾಸರಗೋಡು ಅನ್ಯಾಯವಾಗಿ ಕೇರಳಕ್ಕೆ ಸೇರಿಸಲ್ಪಟ್ಟುದುದು ಚರಿತ್ರೆಯ ದುರಂತ ಎಂದು ನಿವೃತ್ತ ಪ್ರಾಧ್ಯಾಪಕ ಡಾ. ಕೆ ಪ್ರಸನ್ನರೈ ತಿಳಿಸಿದರು.
ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಬದಿಯಡ್ಕದ ಕ್ರಿಯೇಟಿವ್ ಆಟ್ರ್ಸ್ ಎಂಡ್ ಸಯನ್ಸ್‍ಕಾಲೇಜಿನ ಸಭಾಂಗಣದಲ್ಲಿ ನಡೆದ 'ಕನ್ನಡ ರಾಜ್ಯೋತ್ಸವಸಂಭ್ರಮ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಸಾಪ ಕೇರಳ ಗಡಿನಾಡ ಘಟಕ ಅಧ್ಯಕ್ಷ ಎಸ್.ವಿ. ಭಟ್ಟ ಅಧ್ಯಕ್ಷತೆ ವಹಿಸಿದ್ದರು.
ಸಹಾಯಕ ಪ್ರಾಧ್ಯಾಪಕ ಶ್ರೀಧರ ಏತಡ್ಕ ಅವರು'Pರ್ನಾಟಕರಾಜ್ಯೋದಯದ ಇತಿಹಾಸ'ಎಂಬ ವಿಷಯದ ಬಗ್ಗೆ ಹಾಗೂ ಹಿರಿಯ ಸಹಾಯಕ ಪ್ರಾಧ್ಯಾಪಕ ಡಾ.ರಾಧಾಕೃಷ್ಣ ಬೆಳ್ಳೂರು 'ಕನ್ನಡ ಮತ್ತುಬಹುಭಾಷಿಕತ್ವ'ದ ಕುರಿತು ಉಪನ್ಯಾಸ ನೀಡಿದರು. ಯುವ ಸಂಘಟಕ ರಂಗಶರ್ಮ ಉಪ್ಪಂಗಳ, ಉಪನ್ಯಾಸಕ
ಪ್ರಕಾಶ ಎಂ.ಎಸ್., ಪ್ರಾಂಶುಪಾಲ ಸತ್ಯನಾರಾಯಣ ಶರ್ಮ ಉಪಸ್ಥಿತರಿದ್ದರು. ಕಾಲೇಜಿನ ಹಲವು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಜಾನಪದ ಗೀತೆ, ಭಾವಗೀತೆ, ಕನ್ನಡನಾಡು ನುಡಿಯ ಹಿರಿಮೆ-ಗರಿಮೆ ಸಾರುವ ಗೀತೆ ಹಾಡಿದರು. ವಿದ್ಯಾರ್ಥಿನಿಯರಿಂದ ಸಮೂಹ ನೃತ್ಯ, ಊರಿನ ಹಿರಿಯ ಯುವ ಕಲಾವಿದೆಯರು ಹಾಡಿನ ಮೂಲಕ ರಂಜಿಸಿದರು. ವಿದ್ಯಾವಾಣಿ ಮಠದಮೂಲೆ ಸ್ವಾಗತಿಸಿದರು. ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ಜಯಲಕ್ಷೀ,ಹರ್ಷೇಂದ್ರ ಎನ್. ನಿರ್ವಹಣೆ ಮಾಡಿದರು, ಗಣೇಶ್ ಪ್ರಸಾದ್ ಪಿ.ವಂದಿಸಿದರು.
ಬದಿಯಡ್ಕದಲ್ಲಿ 'ಕನ್ನಡ ರಾಜ್ಯೋತ್ಸವ ಸಂಭ್ರಮ'
0
ಡಿಸೆಂಬರ್ 06, 2022