ಪ್ರತಾಪಗಢ: ಜೂಜಾಟದ ದಾಸ್ಯಕ್ಕೆ ಬಿದ್ದ ಪಾಂಡವರು, ದ್ರೌಪದಿಯನ್ನು ಕೌರವರಿಗೆ ಪಣವಿಟ್ಟ ಕಥೆಯನ್ನು ನಾವೆಲ್ಲ ಕೇಳಿದ್ದೇವೆ. ಅದೇ ಕಥೆಯನ್ನು ನೆನಪಿಸುವ ವಿಚಿತ್ರ ಘಟನೆಯೊಂದು ಇಲ್ಲಿನ ನಗರ್ ಕೊತ್ಲಾಲಿಯಲ್ಲಿ ನಡೆದಿದೆ. ಲೂಡೊ ಚಟಕ್ಕೆ ಬಿದ್ದ ವಿವಾಹಿತ ಮಹಿಳೆಯೊಬ್ಬಳು ಹಣವನ್ನೆಲ್ಲ ಕಳೆದುಕೊಂಡು, ಕೊನೆಯಲ್ಲಿ ತನ್ನನ್ನೇ ತಾನು ಪಣವಿಟ್ಟುಕೊಂಡಿದ್ದಾಳೆ.
ರೇಣು,
2 ಮಕ್ಕಳ ತಾಯಿ. ಈಕೆಯ ಪತಿ ರಾಜಸ್ಥಾನದ ಜೈಪುರದಲ್ಲಿ ಕೆಲಸ ಮಾಡುತ್ತಿದ್ದು, ಆಕೆಗೆ ಹಣ
ಕಳುಹಿಸುತ್ತಿದ್ದ. ಆ ಹಣವನ್ನೆಲ್ಲ ತನ್ನ ಭೂ ಮಾಲೀಕನೊಂದಿಗೆ ಲೂಡೋ ಆಡಲು
ಬಳಸುತ್ತಿದ್ದಳು. ಪ್ರತಿನಿತ್ಯ ಇಬ್ಬರೂ ಬೆಟ್ಟಿಂಗ್ ಕಟ್ಟಿಕೊಂಡು ಲೂಡೋ
ಆಡುತ್ತಿದ್ದರು.
ಹಿಂದಿನ ವಾರ ಆಟ ಆಡುತ್ತ ಈಕೆ ಪೂರ್ತಿ ಹಣ ಸೋತಿದ್ದಾಳೆ. ಬಳಿಕ
ಆಟದಲ್ಲಿ ತನ್ನನ್ನೇ ತಾನು ಪಣಕ್ಕಿಟ್ಟುಕೊಂಡಿದ್ದಾಳೆ. ಬಳಿಕ ಪತಿಗೆ ಕರೆ ಮಾಡಿ
ಘಟನೆಯನ್ನು ವಿವರಿಸಿದ್ದಾಳೆ. ಊರಿಗೆ ಮರಳಿದ ಪತಿ ಈ ಕುರಿತು ಸ್ಥಳೀಯ ಠಾಣೆಯಲ್ಲಿ ದೂರು
ನೀಡಿದ್ದಾರೆ. ಆತನ ಘಟನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಎಲ್ಲೆಡೆ
ಹರಿದಾಡುತ್ತಿದೆ.
ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, 6 ತಿಂಗಳ ಹಿಂದೆ ರೇಣು ಪತಿ ಕೆಲಸಕ್ಕಾಗಿ ಜೈಪುರಕ್ಕೆ ಹೋಗಿದ್ದರು. ಈಗ ಆಕೆ ಭೂ ಮಾಲೀಕನೊಂದಿಗೆ ವಾಸಿಸಲು ಪ್ರಾರಂಭಿಸಿದ್ದಾಳೆ. ಅಲ್ಲಿಂದ ವಾಪಸ್ ಬರಲು ಕೇಳಿಕೊಂಡೆ. ಆದರೆ ಆಕೆ ಸಿದ್ಧವಿಲ್ಲ ಎಂದು ರೇಣು ಪತಿ ಆರೋಪಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ವ್ಯಕ್ತಿಯನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇವೆ. ಆತನ ಸಂಪರ್ಕ ಸಿಕ್ಕ ತಕ್ಷಣ ತನಿಖೆ ಆರಂಭಿಸುತ್ತೇವೆ ಎಂದು ಪೊಲೀಸ್ ಅಧಿಕಾರಿ ಸುಬೋಧ್ ಗೌತಮ್ ಹೇಳಿದ್ದಾರೆ.