ಕಾಸರಗೋಡು: ಕರ್ನಾಟಕದ ಅವಿಭಾಜ್ಯ ಅಂಗವಾಗಿರುವ ಕಾಸರಗೋಡನ್ನು ಕರ್ನಾಟಕಕ್ಕೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಮಹಾಜನ ವರದಿಯನ್ನು ಯಥಾಪ್ರಕಾರ ಜಾರಿಗೊಳಿಸುವಂತೆ ಕರ್ನಾಟಕ ಗಮಕ ಕಲಾ ಪರಿಷತ್‍ಕೇರಳ ಗಡಿನಾಡ ಘಟಕ ಪದಾಧಿಕಾರಿಗಳು ಕರ್ನಾಟಕ ಮುಖ್ಯಮಂತ್ರಿಯನ್ನು ಮನವಿ ಮೂಲಕ ಒತ್ತಾಯಿಸಿದ್ದಾರೆ.
ಕಾಸರಗೋಡಿನಲ್ಲಿ 10ಲಕ್ಷಕ್ಕೂ ಮಿಕ್ಕಿ ಕನ್ನಡಿಗರಿದ್ದು, ಕನ್ನಡದ ಅಸ್ತಿತ್ವಕ್ಕಾಗಿ ನಿರಂತರ ಹೋರಾಟ ನಡೆಸಬೇಕಾದ ಅನಿವಾರ್ಯತೆಯಿದೆ. ಕರ್ನಾಟಕ ಸಮಿತಿ ಸಏರಿದಂತೆ ವಿವಿಧ ಸಂಘಟನೆಗಳ ಸಹಕರದೊಂದಿಗೆ ನಿರಂತರ ಸತ್ಯಾಗ್ರಹಗಳು ಇಂದಿಗೂ ನಡೆಯುತ್ತಿದೆ. ಭಾಷಾವಾರು ಪ್ರಾಂತ್ಯ ರಚನೆ ವೇಳೆ ಕಾಸರಗೋಡನ್ನು ಅನ್ಯಾಯವಾಗಿ ಕೇರಳಕ್ಕೆ ಸೇರ್ಪಡೆಗೊಳಿಸಲಾಗಿತ್ತು. ಇದನ್ನು ಖಂಡಿಸಿ ಕನ್ನಡಿಗರು ನಡೆಸಿದ ಹೋರಾಟದ ಫಲವಾಗಿ ಕೇಂದ್ರ ಸರ್ಕಾರ ಜಸ್ಟಿಸ್ ಮೆಹರ್‍ಚಂದ್ ಮಹಾಜನ್ ಅವರನ್ನು ಗಡಿಸಮಸ್ಯೆ ಇತ್ಯರ್ಥಕ್ಕಾಗಿ ನೇಮಿಸಿ ತನ್ನ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಿದ್ದರೂ, ಈ ವರದಿ ಇತ್ಯರ್ಥವಾಗದೆ ಪಾರ್ಲಿಮೆಂಟ್‍ನಲ್ಲಿ ಉಳಿಯುವಂತಾಗಿದೆ. ಕಾಸರಗೋಡು ಚಂದ್ರಗಿರಿ ಹೊಳೆಯ ಬಡಗ ಭಾಗದ 72ಗ್ರಾಮಗಳು ಅಚ್ಛಕನ್ನಡ ಪ್ರದೇಶವಾಗಿದ್ದು, ಕರ್ನಾಟಕದೊಂದಿಗೆ ಸೇರ್ಪಡೆಗೊಳ್ಳಲು ಎಲ್ಲ ಅರ್ಹತೆಯನ್ನೂ ಹೊಂದಿರುವುದಾಗಿ ವರದಿ ತಿಳಿಸಿತ್ತು. ಕರ್ನಾಟಕದ ಅವಿಭಾಜ್ಯ ಅಂಗವಾಗಿದ್ದ ಕಾಸರಗೋಡು ತಾಲೂಕನ್ನು ಕರ್ನಾಟಕದೊಂದಿಗೆ ಸೇರ್ಪಡೆಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಮಸ್ತ ಕನ್ನಡಿಗರ ಪರವಾಗಿ ಮನವಿ ಸಲ್ಲಿಸಿರುವುದಾಗಿ ಗಮಕ ಕಲಾ ಪರಿಷತ್ ಗಡಿನಾಡ ಘಟಕ ಅಧ್ಯಕ್ಷ ಟಿ.ಶಂಕರನಾರಾಯಣ ಭಟ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಾಸರಗೋಡು ಕರ್ನಾಟಕ ಸೇರ್ಪಡೆ: ಮಹಾಜನ ವರದಿ ಜಾರಿಗೆ ಗಮಕ ಕಲಾಪರಿಷತ್ ನಿಂದ ಮನವಿ
0
ಡಿಸೆಂಬರ್ 13, 2022
Tags