ಮುಳ್ಳೇರಿಯ: ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಕೀರಿಕ್ಕಾಡು ಸ್ಮಾರಕ ಸಭಾಭವನದಲ್ಲಿ ಇತ್ತೀಚೆಗೆ ನಡೆದ ಗಡಿ ಸಂಸ್ಕøತಿ ಹಾಗೂ ವಾರ್ಷಿಕೋತ್ಸವದ ಪ್ರಯುಕ್ತ ‘ರಾಜಾಧ್ವರ’ ಯಕ್ಷಗಾನ ಬಯಲಾಟವು ಸಂಘದ ಸದಸ್ಯರು ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಪ್ರದರ್ಶನಗೊಂಡಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಹೊಸಮೂಲೆ ಗಣೇಶ್ ಭಟ್, ಚೆಂಡೆ ಮದ್ದಳೆ ಚಕ್ರತಾಳ ವಾದನದಲ್ಲಿ ಕಲ್ಮಡ್ಕ ಶಂಕರ ಭಟ್, ವಿಷ್ಣುಶರಣ ಬನಾರಿ, ಕೃಷ್ಣಪ್ರಸಾದ್ ಬೆಳ್ಳಿಪ್ಪಾಡಿ, ಯಂ.ಅಪ್ಪಯ್ಯ ಮಣಿಯಾಣಿ ಮಂಡೆಕೋಲು, ರಜತ್ ಡಿ.ಆರ್, ನಿತೀಶ್ ಕುಮಾರ್ ಎಂಕಣ್ಣಮೂಲೆ ಅವರು ಭಾಗವಹಿಸಿದರು.
ಶ್ರೀಕೃಷ್ಣನಾಗಿ ದುಷ್ಯರಿತ ದೇರಾಜೆ, ಒಂದನೇ ಧರ್ಮರಾಯನಾಗಿ ಗಣೇಶ ಶರ್ಮ ಸಿದ್ಧಕಟ್ಟೆ, ಎರಡನೆಯ ಧರ್ಮರಾಯನಾಗಿ ಭಾಸ್ಕರ ಮಾಸ್ತರ್ ಕಾವು, ಭೀಮಸೇನನಾಗಿ ವಿದ್ಯಾಭೂಷಣ ಪಂಜಾಜೆ, ಸಹದೇವನಾಗಿ ಹರ್ಷಿತ ಬೆಳ್ಳಿಪ್ಪಾಡಿ, ಭೀಷ್ಮನಾಗಿ ಐತ್ತಪ್ಪ ಗೌಡ ಮುದಿಯಾರು, ಹನೂಮಂತನಾಗಿ ಬಾಲಕೃಷ್ಣ ಗೌಡ ದೇಲಂಪಾಡಿ, ಪುರುμÁಮೃಗ ರಂಜಿತ್ ಮಲ್ಲ, ಶಿಶುಪಾಲನಾಗಿ ಯಂ.ರಮಾನಂದ ರೈ ದೇಲಂಪಾಡಿ, ದಂತವ್ಕ್ತ್ರನಾಗಿ ವೀರಪ್ಪ ನಡುಬೈಲು, ಭಗದತ್ತನಾಗಿ ರಾಮನಾಯ್ಕ ದೇಲಂಪಾಡಿ ಮತ್ತು ಸೋಮದತ್ತನಾಗಿ ಭರತ್ ಉಳ್ಳೋಡು ಅವರು ಪಾತ್ರಗಳನ್ನು ನಿರ್ವಹಿಸಿದರು. ನಾರಾಯಣ ಮಾಸ್ತರ್ ದೇಲಂಪಾಡಿ ಕಾರ್ಯಕ್ರಮ ನಿರೂಪಿಸಿದರು.