ಬದಿಯಡ್ಕ: ನೀರ್ಚಾಲು ಸಮೀಪದ ಮಾನ್ಯ ಶ್ರೀ ಮೂವರು ದೈವಗಳ ಸೇವಾ ಸಮಿತಿ ಹಾಗೂ ಹನ್ನೆರಡು ವರ್ಗದವರ ವಿಶೇಷ ಸಭೆ ಇಂದು(ಜ.1) ಸಂಜೆ 4:30 ಕ್ಕೆ ಮಾನ್ಯ ಶ್ರೀ ಮೂವರು ದೈವಗಳ ಭಂಡಾರ ಮನೆ (ಪಡುಮನೆ) ಯಲ್ಲಿ ನಡೆಯಲಿದೆ.ಸಭೆಯಲ್ಲಿ 2022 ನೇ ವರ್ಷದ ಒತ್ತೆಕೋಲದ ಆಯವ್ಯಯ ಮಂಡನೆ, 2023 ನೇ ವರ್ಷದ ಹೋಸ್ತಿನಕೋಲದ ನಿರ್ವಹಣೆಯ ಬಗ್ಗೆ ಹಾಗೂ ಇನ್ನಿತರ ಅಗತ್ಯ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ. ಸಂಬಂಧಪಟ್ಟವರು ಉಪಸ್ಥಿತರಿದ್ದು ಸೂಕ್ತ ಸಲಹೆ ಸೂಚನೆಗಳನ್ನು ನೀಡಿ ಸಹಕರಿಸಬೇಕೆಂದು ಮಾನ್ಯ ಶ್ರೀ ಮೂವರು ದೈವಗಳ ಸೇವಾ ಸಮಿತಿ ಪದಾಧಿಕಾರಿಗಳು ವಿನಂತಿಸಿದ್ದಾರೆ.
ಮಾನ್ಯದಲ್ಲಿ ಇಂದು ಸಭೆ
0
ಡಿಸೆಂಬರ್ 31, 2022