ಕುಂಬಳೆ : ಕಾಸರಗೋಡಿನ ಸೃಜನಶೀಲ ಕತೆಗಾರ್ತಿಯಾದ ಸ್ನೇಹಲತಾ ದಿವಾಕರ್ ಕುಂಬಳೆ ಅವರು ಶಿವಮೊಗ್ಗ ಕರ್ನಾಟಕ ಸಂಘದ ಎಂ.ಕೆ.ಇಂದಿರಾ ಪುಸ್ತಕ ಪ್ರಶಸ್ತಿಗೆ ಆಯ್ಕೆಯಾಗಿದ್ದು ಶಿವಮೊಗ್ಗ ಕರ್ನಾಟಕ ಸಂಘದ ಭವನದಲ್ಲಿ ಪ್ರದಾನಿಸಲಾಯಿತು.
ಸ್ನೇಹಲತಾ ದಿವಾಕರ ಅವರ ‘ಆಮೆ’ ಎಂಬ ಕಥಾ ಸಂಕಲನಕ್ಕೆ ಹತ್ತು ಸಾವಿರ ರೂ.ನಗದು ಹಾಗೂ ಪ್ರಶಸ್ತಿ ಫಲಕವನ್ನು ಖ್ಯಾತ ಕಥೆಗಾರ್ತಿ ಸವಿತಾ ನಾಗಭೂಷಣ್ ಅವರು ಪ್ರಶಸ್ತಿ ಪ್ರದಾನಗೈದರು. ಶಿವಮೊಗ್ಗದ ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್.ಸುಂದರ್ ರಾಜ್ ಸಭೆಯ ಅಧ್ಯಕ್ಷತೆವಹಿಸಿದ್ದರು. ಪ್ರ.ಕಾರ್ಯದರ್ಶಿ ಡಾ.ಆಶಾಲತಾ ಮೊದಲಾದವರು ಉಪಸ್ಥಿತರಿದ್ದರು.
ಸ್ನೇಹಲತಾ ದಿವಾಕರ್ ಕುಂಬಳೆಗೆ ಶಿವಮೊಗ್ಗ ಕರ್ನಾಟಕ ಸಂಘದ ಪಸ್ತಕ ಪುರಸ್ಕಾರ ಪ್ರದಾನ
0
ಡಿಸೆಂಬರ್ 04, 2022
Tags