ಕಾಸರಗೋಡು: ನೀಲೇಶ್ವರ ಮುನ್ಸಿಪಲ್ ಕಾರ್ಪೋರೇಶನ್‍ನಲ್ಲಿ ಸಂಪೂರ್ಣ ಸ್ಮಾರ್ಟ್ ಕಸ ನಿಗಾ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಅಧ್ಯಕ್ಷೆ ಟಿ.ವಿ.ಶಾಂತಾ ಅವರು ಘೋಷಣೆ, ºಸಿರು ಕ್ರಿಯಾಸೇನಾ ಸಂಗಮ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿದರು.
ನಗರಸಭೆ ವ್ಯಾಪ್ತಿಯಲ್ಲಿ 11,858 ಮನೆಗಳು ಮತ್ತು 2,419 ಸಂಸ್ಥೆಗಳಲ್ಲಿ ಕ್ಯೂಆರ್ ಕೋಡ್ ಅಳವಡಿಕೆ ಪೂರ್ಣಗೊಂಡ ಆಧಾರದ ಮೇಲೆ ಘೋಷಣೆ ಮಾಡಲಾಗಿದೆ. ಕ್ಯೂಆರ್ ಕೋಡ್ ನ್ನು ಹಸಿರು ಕ್ರಿಯಾಸೇನೆ ಮತ್ತು ಆಯ್ದ ಕುಟುಂಬಶ್ರೀ ಕಾರ್ಯಕರ್ತರು ನೈರ್ಮಲ್ಯ ಮಿಷನ್ ಮತ್ತು ಕೆಲ್ಟ್ರಾನ್ ತಾಂತ್ರಿಕ ನೆರವಿನ ಸಹಯೋಗದಲ್ಲಿ ಮುದ್ರಿಸಿದ್ದಾರೆ. ಇದರೊಂದಿಗೆ ನಗರಸಭೆಯಲ್ಲಿ ಅಜೈವಿಕ ತ್ಯಾಜ್ಯ ಸಂಗ್ರಹಣೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮತ್ತು ಪಾರದರ್ಶಕವಾಗಿ ಮಾಡಬಹುದು.
ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಟಿ.ಪಿ.ಲತಾ ಅಧ್ಯಕ್ಷತೆ ವಹಿಸಿದ್ದರು. ನವಕೇರಳ ಮಿಷನ್ ಜಿಲ್ಲಾ ಸಂಯೋಜಕ ಕೆ.ಬಾಲಕೃಷ್ಣನ್ ಮುಖ್ಯ ಅತಿಥಿಯಾಗಿದ್ದರು. ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಪಿ.ರವೀಂದ್ರನ್, ವಿ.ಗೌರಿ, ಪಿ.ಸುಭಾಸ್, ದಾಕ್ಷಾಯಣಿ ಕುಂಞÂ ಕಣ್ಣನ್, ಕೌನ್ಸಿಲರ್‍ಗಳಾದ ಇ.ಶಜೀರ್, ಶಂಶುದ್ದೀನ್ ಅರಿಂಚಿರ, ಪಿ.ಭಾರ್ಗವಿ, ರಫೀಕ್ ಕೋಟ್ಟಪ್ಪಾರ, ವಿನು ನೀಲವ್, ಸಿಡಿಎಸ್ ಅಧ್ಯಕ್ಷೆ ಪಿ.ಎಂ.ಸಂಧ್ಯಾ, ನೈರ್ಮಲ್ಯ ಮಿಷನ್ ಕಾರ್ಯಕ್ರಮ ಅಧಿಕಾರಿ ರಂಜಿತ್ ಕುಮಾರ್ ವತ್ಸರಾಜನ್ ಮಾತನಾಡಿದರು. ಸ್ಮಾರ್ಟ್ ಗಾರ್ಬೇಜ್ ಆ್ಯಪ್ ಚಟುವಟಿಕೆಗಳ ಮುಂದಾಳತ್ವ ವಹಿಸಿದ್ದ ವೀಣಾರಾಜನ್, ಹಸಿರು ಕ್ರಿಯಾ ಸೇನಾ ಸದಸ್ಯರು ಹಾಗೂ ಕುಟುಂಬಶ್ರೀ ಕಾರ್ಯಕರ್ತರನ್ನು ನಗರಸಭೆ ವತಿಯಿಂದ ಗೌರವಿಸಲಾಯಿತು. ನಗರಸಭಾ ಕಾರ್ಯದರ್ಶಿ ಕೆ.ಮನೋಜ್ ಕುಮಾರ್ ಸ್ವಾಗತಿಸಿ, ಜೆ.ಎಚ್.ಐ. ಪಿ.ಪಿ.ಸ್ಮಿತಾ ವಂದಿಸಿದರು.
ನೀಲೇಶ್ವರದಲ್ಲಿ ಸಂಪೂರ್ಣ ಸ್ಮಾರ್ಟ್ ಕಸದ ಮಾನಿಟರಿಂಗ್ ಉದ್ಘಾಟನೆ
0
ಡಿಸೆಂಬರ್ 09, 2022
Tags