ಬದಿಯಡ್ಕ: ನೀರ್ಚಾಲು ಸಮೀಪದ ಮಾನ್ಯ ಶ್ರೀ ಅಯ್ಯಪ್ಪ ಸೇವಾಸಂಘದ 41ನೇ ವಾರ್ಷಿಕೋತ್ಸವ ಹಾಗೂ ಶ್ರೀ ಅಯ್ಯಪ್ಪನ್ ತಿರುವಿಳಕ್ಕ್ ಮಹೋತ್ಸವವು ಶುಕ್ರವಾರ ಆರಂಭÀವಾಗಿದ್ದು, ವಿವಿಧ ಕಾರ್ಯಕ್ರಮಗಳೊಂದಿಗೆ ಜರಗುತ್ತಿದೆ. ಇಂದು (ಜ.1)ರಂದು ಶ್ರೀ ಅಯ್ಯಪ್ಪನ್ ತಿರುವಳಕ್ಕ್ ಮಹೋತ್ಸವವು ನಡೆಯಲಿದೆ. ನಾಳೆ (ಜ.2) ಪ್ರಾತಃಕಾಲ ಶ್ರೀ ಅಯ್ಯಪ್ಪ ಗೀತೆ, ಬೇಟೆವಿಳಿ, ಅಗ್ನಿಪೂಜೆ, ಕೆಂಡಸೇವೆ, ತಿರಿವುಯಿಚ್ಚಲ್, ಅಯ್ಯಪ್ಪ ವಾವರ ಯುದ್ಧ, ಬೆಳಗ್ಗೆ 5 ಗಂಟೆಗೆ ಶರಣಂ ವಿಳಿಯೊಂದಿಗೆ ಕಾರ್ಯಕ್ರಮ ಸಂಪನ್ನವಾಗಲಿದೆ. ಶನಿವಾರ ಬೆಳಗ್ಗೆ ಶರಣಂ ವಿಳಿ, ಗಣಪತಿಹೋಮ, ವಿವಿಧ ಭಜನಾ ಸಂಘಗಳಿಂದ ಭಜನೆ, ಅನ್ನದಾನ, ಸಂಜೆ ತಾಯಂಬಕ, ಕುಣಿತ ಭಜನೆ, ಸಂಜೆ ಶ್ರೀ ರಕ್ತೇಶ್ವರೀ ಮತ್ತು ಪರಿವಾರ ದೈವಗಳ ಕ್ಷೇತ್ರ ದೇವರಕೆರೆಯಿಂದ ಶ್ರೀ ಮಂದಿರಕ್ಕೆ ಉಲ್ಪೆ ಮೆರವಣಿಗೆ ಹಾಗೂ ಮಹಾಪೂಜೆ, ಅನ್ನದಾನ ನಡೆಯಿತು. ರಾತ್ರಿ ಹನುಮಗಿರಿ ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.
ಇಂದು ಮಾನ್ಯದಲ್ಲಿ ಶ್ರೀ ಅಯ್ಯಪ್ಪನ್ ತಿರುವಿಳಕ್ಕ್ ಮಹೋತ್ಸವ
0
ಡಿಸೆಂಬರ್ 31, 2022