ಕಾಸರಗೋಡು: ಪ್ರೆಸ್ ಕ್ಲಬ್ ಕಾಸರಗೋಡು ವತಿಯಿಂದ ವಿಶ್ವಕಪ್ ಫುಟ್‍ಬಾಲ್ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಪತ್ರಕರ್ತರಿಗಾಗಿ ಪ್ರೆಸ್‍ಕ್ಲಬ್ ವಠಾರದಲ್ಲಿ ಗುರುವಾರ ಶೂಟೌಟ್ ಆಯೋಜಿಸಲಾಯಿತು.
ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ.ವೈಭವ್ ಸಕ್ಸೇನಾ ಗೋಲು ಬಾರಿಸುವ ಮೂಲಕ ಶೂಟೌಟ್ ಉದ್ಘಾಟಿಸಿದರು. ಪ್ರೆಸ್‍ಕ್ಲಬ್ ಅಧ್ಯಕ್ಷ ಮುಹಮ್ಮದ್ ಹಾಶಿಂ ಅಧ್ಯಕ್ಷತೆ ವಹಿಸಿದ್ದರು. ರ್ಶಿ ಕೆ.ವಿ. ಪದ್ಮೇಶ್ ಸ್ವಾಗತಿಸಿದರು. ಕೋಶಾಧಿಕಾರಿ ಶೈಜು ಪಿಲಾತ್ತರ ವಂದಿಸಿದರು. ಶೂಟೌಟ್ ಸ್ಪರ್ಧೆಯಲ್ಲಿ ಕೆ.ಸಿ.ಲೈಜುಮೋನ್ ಬಹುಮಾಣ ಗಳಿಸಿದರು.
ಈ ಹಿಂದೆ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಲಾಗಿದ್ದ ವಿಶ್ವ ಫುಟ್ಬಾಲ್ ಪಂದ್ಯಾವಳಿಯಲ್ಲಿ ವಿಜೇತರಾಗಬಹುದಾದ ತಂಡ, ಫೈನಲ್‍ಗೆ ತಲುಪಬಹುದಾದ ತಂಡಗಳು, ಫೈನಲ್ ಪಂದ್ಯಾಟದಲ್ಲಿ ಗೋಲು ಸ್ಥಿತಿ ಯಾವ ರೀತಿ ಇರಬಹುದು ಎಂಬ ಪ್ರಶ್ನಾವಳಿಗಳನ್ನೊಳಗೊಂಡ ಫುಟ್ಬಾಲ್ ಭವಿಷ್ಯವಾಣಿ ಸ್ಪರ್ಧೆಯನ್ನು ಸಚಿವ ವಿ.ಶಿವನ್ ಉದ್ಘಾಟಿಸಿದ್ದದರು.
ವಿಶ್ವಕಪ್ ಫುಟ್‍ಬಾಲ್ ಪ್ರೆಸ್‍ಕ್ಲಬ್ ವತಿಯಿಂದ ಶೂಟೌಟ್ ಸ್ಪರ್ಧೆ
0
ಡಿಸೆಂಬರ್ 08, 2022
Tags