ನವದೆಹಲಿ:ಗ್ಯಾಂಬಿಯಾದಲ್ಲಿ ಮಕ್ಕಳ ಸಾವಿಗೆ ಕಾರಣವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಶಂಕೆ ವ್ಯಕ್ತಪಡಿಸಿದ ನಂತರ ಭಾರತದ ಮೇಯ್ಡನ್ ಫಾರ್ಮಾಸೂಟಿಕಲ್ಸ್ ಸಂಸ್ಥೆ ತಯಾರಿಸಿದ ಕೆಮ್ಮಿನ ಸಿರಪ್ ಅನ್ನು ಮಾರುಕಟ್ಟೆಯಿಂದ ವಾಪಸ್ ಪಡೆಯಲಾಗಿದ್ದರೆ, ಈ ಸಿರಪ್ ನ ಮಾದರಿಗಳಲ್ಲಿ ಯಾವುದೇ ದೋಷ ಕಂಡುಬಂದಿಲ್ಲವೆಂದು ಸರ್ಕಾರಿ ಪ್ರಯೋಗಾಲಯದ ವರದಿ ತಿಳಿಸಿದ ಹಿನ್ನೆಲೆಯಲ್ಲಿ ಫ್ಯಾಕ್ಟರಿ ಮರುಆರಂಭಕ್ಕೆ ಸಂಸ್ಥೆ ಅನುಮತಿ ಕೋರಲಿದೆ ಎಂದು ಸಂಸ್ಥೆಯ ಆಡಳಿತ ನಿರ್ದೇಶಕ ನರೇಶ್ ಕುಮಾರ್ ಗೋಯಲ್ ತಿಳಿಸಿದ್ದಾರೆ.