ತಿರುವನಂತಪುರ: ರಾಜ್ಯ ಸರ್ಕಾರದ ಮುಸ್ಲಿಂ ತುಷ್ಟೀಕರಣ ನೀತಿಯನ್ನು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ ಟಿ ರಮೇಶ್ ತೀವ್ರವಾಗಿ ಟೀಕಿಸಿದ್ದಾರೆ.
ರಾಜ್ಯ ಸರ್ಕಾರ ಕಾರ್ಯವಿಧಾನ ಸಂವಿಧಾನದ ಪ್ರಕಾರವೇ ಅಥವಾ ಷರಿಯಾ ಪ್ರಕಾರವೇ ಎಂದು ಅವರು ಪ್ರಶ್ನಿಸಿದರು. ಎಂ.ಟಿ.ರಮೇಶ್ ಮಾತನಾಡಿ, ಸರಕಾರ ಮುಸ್ಲಿಂ ಧಾರ್ಮಿಕ ಮುಖಂಡರ ಮುಂದೆ ಮಂಡಿಯೂರುತ್ತಿದೆ ಎಂದು ಟೀಕಿಸಿರುವರು.
ಸರ್ಕಾರ ಸಂವಿಧಾನದ ನಿಯಮಗಳನ್ನು ಪಾಲಿಸಬೇಕು. ಸಮಾನ ನ್ಯಾಯ, ಸಮಾನ ಹಕ್ಕು ಮತ್ತು ಲಿಂಗ ಸಮಾನತೆ ದೇಶದ ಸಂವಿಧಾನದಲ್ಲಿ ಕಲ್ಪಿಸಲಾದ ಪ್ರಮುಖ ಪರಿಕಲ್ಪನೆಗಳು. ಅದರ ಅನುಷ್ಠಾನವು ಸಾಂವಿಧಾನಿಕವಾಗಿ ಕಾರ್ಯನಿರ್ವಹಿಸುವ ರಾಜ್ಯದ ಪ್ರಾಥಮಿಕ ಜವಾಬ್ದಾರಿಯಾಗಿದೆ. ಆದರೆ ಕೆಲ ಸಮಯದಿಂದ ರಾಜ್ಯ ಸರ್ಕಾರ ಸಂವಿಧಾನದ ತತ್ವಗಳನ್ನು ಮತ್ತು ಮೌಲ್ಯಗಳನ್ನು ಅನುಸರಿಸಲು ಪ್ರಯತ್ನಿಸುತ್ತಿಲ್ಲ. ಬದಲಿಗೆ ಧಾರ್ಮಿಕ ಮೂಲಭೂತವಾದಿಗಳು ಮತ್ತು ಧಾರ್ಮಿಕ ಸಂಘಟನೆಗಳ ಪಟ್ಟಭದ್ರ ಹಿತಾಸಕ್ತಿಗಳಿಗೆ ಅನುಗುಣವಾಗಿ ನಿಲುವು ತಳೆಯುವ ಸರ್ಕಾರವಾಗಿ ಪಿಣರಾಯಿ ಸರ್ಕಾರ ಬದಲಾಗುತ್ತಿದೆ ಎಂದು ಎಂ.ಟಿ.ರಮೇಶ್ ಹೇಳಿದರು.
ಮುಸ್ಲಿಂ ಸಂಘಟನೆಗಳ ಮುಂದೆ ಸರ್ಕಾರ ತಲೆಬಾಗುತ್ತಿದೆ. ರಾಜ್ಯ ಸರ್ಕಾರವು ಅವರ ತೀರ್ಪುಗಳು ಮತ್ತು ಅವರ ನಿರ್ಧಾರಗಳನ್ನು ಜಾರಿಗೊಳಿಸುತ್ತದೆ. ಕುಟುಂಬಶ್ರೀಯ ಲಿಂಗ ಸಮಾನತೆಯ ಪ್ರತಿಜ್ಞೆಯನ್ನು ಹಿಂತೆಗೆದುಕೊಳ್ಳುವ ಸರ್ಕಾರದ ನಿರ್ಧಾರ ಇದಕ್ಕೆ ತಾಜಾ ಉದಾಹರಣೆಯಾಗಿದೆ. ಸಮಸ್ತದ ನಿರ್ಧಾರಗಳಿಗೆ ಸÀರ್ಕಾರ ತಲೆಬಾಗುತ್ತಿರುವುದು ಇದೇ ಮೊದಲಲ್ಲ ಎಂದು ಎಂ.ಟಿ.ರಮೇಶ್ ತಿಳಿಸಿದರು.
ಸಮಸ್ತದ ಬೆದರಿಕೆಗೆ ಮಣಿದು ವಕ್ಫ್ ಬೋರ್ಡ್ ನೇಮಕಾತಿಯನ್ನು ಪಿಎಸ್‍ಸಿಗೆ ಬಿಡಲು ಸರ್ಕಾರ ತೆಗೆದುಕೊಂಡ ನಿರ್ಧಾರವನ್ನು ಹಿಂಪಡೆಯಲಾಗಿದೆ. ಮುಸ್ಲಿಂ ಸಂಘಟನೆಗಳ ಬೆದರಿಕೆಗೆ ಮಣಿದು ಶ್ರೀರಾಮ್ ವೆಂಕಟರಾಮನ್ ಅಲಪ್ಪುಳ ಜಿಲ್ಲಾಧಿಕಾರಿ ಮಾಡುವ ನಿರ್ಧಾರವನ್ನೂ ಸರ್ಕಾರ ಹಿಂಪಡೆದಿದೆ. ಲಿಂಗ ತಟಸ್ಥತೆಯ ಭಾಗವಾಗಿ ಮತ್ತು ಸಮಸ್ತದ ಬೆದರಿಕೆಯಿಂದ ಸರ್ಕಾರವು ಸಮವಸ್ತ್ರವನ್ನು ಪರಿಷ್ಕರಿಸುವ ನಿರ್ಧಾರದಿಂದ ಹಿಂದೆ ಸರಿದಿದೆ ಎಂದು ಎಂಟಿ ರಮೇಶ್ ಹೇಳಿದ್ದಾರೆ.
ರಾಜ್ಯ ಸರ್ಕಾರ ಆಡಳಿತ ನಡೆಸುತ್ತಿರುವುದು ಸಂವಿಧಾನದ ಪ್ರಕಾರವೇ ಅಥವಾ ಷರಿಯಾ ಪ್ರಕಾರವೇ?'; ಮುಸ್ಲಿಂ ಸಂಘಟನೆಗಳ ಮುಂದೆ ಸರ್ಕಾರ ಮಂಡಿಯೂರಿದೆ: ಎಂ ಟಿ ರಮೇಶ್
0
ಡಿಸೆಂಬರ್ 05, 2022