ಮಂಜೇಶ್ವರ: ಮಂಜೇಶ್ವರ ವಲಯ ಸಮಸ್ತ ಕೇರಳ ಜಮೀಯ್ಯತುಲ್ ಮುಅಲ್ಲಿಮೀನ್ ಮತ್ತು ಸಮಸ್ತ ಕೇರಳ ಮದ್ರಸ ಜಂಟಿಯಾಗಿ ನಡೆಸುತ್ತಿರುವ ತನ್ಬೀಹ್ (ಎದ್ದೇಳಿ)-ಮಾದಕ ದ್ರವ್ಯ ವಿರೋಧಿ ಜಾಗೃತಿ ಅಭಿಯಾನದ ಆರಂಭವಾಗಿ ಮಂಜೇಶ್ವರ ವ್ಯಾಪ್ತಿಯ 33 ಮದ್ರಸ ಮಹಲ್‍ಗಳ ವ್ಯಾಪ್ತಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಡಿ. 20 ರಿಂದ ಜನವರಿ 20 ರವರೆಗೆ ವಿದ್ಯಾರ್ಥಿಗಳ ಪ್ರಚಾರ ಜಾಥಾವನ್ನು ಆಯೋಜಿಸಿದೆ. ಇದರೊಂದಿಗೆ ಹೆಚ್ಚುತ್ತಿರುವ ಅನೈತಿಕತೆ ಮತ್ತು ಲಿಂಗ ತಟಸ್ಥತೆಯ ವಿರುದ್ಧ ಪ್ರಚಾರದ ಭಾಗವಾಗಲಿದೆ.
ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಅಭಿಯಾನವನ್ನು ಉದ್ಘಾಟಿಸಿದರು. ಕಾರ್ಯಕ್ರಮ ಸಮಿತಿ ಅಧ್ಯಕ್ಷ ಸೈಫುಲ್ಲಾ ತಂಙಳ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಅಬ್ದುಲ್ ಖಾದರ್ ಮದನಿ ಪ್ರಾರ್ಥನೆ ನಡೆಸಿಕೊಟ್ಟರು. ಹಾಶಿರ್ ಹಮೀದಿ ಮುಖ್ಯ ಭಾಷಣ ಮಾಡಿದರು. ಅಬ್ದುಲ್ ಖಾದರ್ ಫೈಝಿ, ಅಹ್ಮದ್ ಬಾವ ಹಾಜಿ, ಫಾರೂಕ್ ಮೌಲವಿ, ಇಬ್ರಾಹಿಂ ಬಟರ್ ಫ್ಲೈ, ಸೈಯದ್ ಕುಂಜತ್ತೂರು, ಎಸ್.ಎಂ. ಬಶೀರ್ ಮಾತನಾಡಿದರು. ಸಂಚಾಲಕ ಸಲ್ಮಾನುಲ್ ಫಾರಿಸ್ ಯಮಾನಿ ಸ್ವಾಗತಿಸಿ, ಅಬ್ದುಲ್ ನಾಸಿರ್ ಅಝ್ಹರಿ ವಂದಿಸಿದರು.
ತನ್ಬೀಹ್: ಅಮಲು ವಿರೋಧಿ ಅಭಿಯಾನ ಪ್ರಾರಂಭ
0
ಡಿಸೆಂಬರ್ 21, 2022
Tags