ಮಂಜೇಶ್ವರ : ಯೇಸು ಕ್ರಿಸ್ತರ ಬೋಧನೆಗಳಾದ ಪರಸ್ಪರ ಕ್ಷೇಮ ಪ್ರೀತಿ ಕರುಣೆ ದಯೆ ಸಹನೆ ಸೇವೆಯಿಂದ ಬಾಳುವ ಮೂಲಕ ಶಾಂತಿ ಸೌಹಾರ್ದತೆ ಬಂಧುತ್ವ ಸಮಾಜದಲ್ಲಿ ನೆಲೆಗೊಳ್ಳಲಿ. ಪ್ರಮುಖವಾಗಿ ಮನುಕುಲದಲ್ಲಿ ಮನುಷ್ಯತ್ವದಿಂದ ಜೀವಿಸುವುದೇ ಧರ್ಮವಾಗಿದೆ ಮಾತ್ರವಲ್ಲದೆ ಇದುವೇ ಕ್ರಿಸ್ಮಸ್ ಸಂದೇಶವಾಗಿದೆ ಎಂದು ಮಂಜೇಶ್ವರ ಮರ್ಸಿ ಅಮ್ಮನ ದೇವಾಲಯದ ಧರ್ಮಗುರು ಎಡ್ವಿನ್ ಪಿಂಟೋ ಹೇಳಿದರು.
ಮಂಜೇಶ್ವರ ಮರ್ಸಿ ಅಮ್ಮನವರ ಚರ್ಚ್ ಅಂಗಣದಲ್ಲಿ ಆಯೋಜಿಸಲಾದ ಕ್ರಿಸ್ಮಸ್ ಹಬ್ಬದ ಸಹಮಿಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಧಾರ್ಮಿಕ ಮುಂದಾಳು ಶ್ರೀ ಕೃಷ್ಣ ಭಟ್, ಕಾಸರಗೋಡು ಜಿಲ್ಲಾ ಪಂಚಾಯತಿ ಮಾಜಿ ಸ್ಥಾಯೀ ಸಮಿತಿ ಅಧ್ಯಕ್ಷ ಹμರ್Áದ್ ವರ್ಕಾಡಿ, ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ಜೀನ್ ಲವಿನಾ ಮೊಂತೇರೊ, ಹರೀಶ್ ಮಂಜೇಶ್ವರ, ಆದರ್ಶ್ ಮೊದಲಾದವರು ಮುಖ್ಯ ಅತಿಥಿಗಳಾಗಿದ್ದರು. ವಿಲ್ಫ್ರಡ್ ಡಿಸೋಜ, ಪಿಲಿಪ್ ಮೊಂತೇರೋ, ನವೀನ್ ಮೊಂತೇರೋ ಹಾಗೂ ಕ್ಲಾರಿ ಮೊಂತೇರೋ ಕಾರ್ಯಕ್ರಮಕ್ಕೆ ನೇತೃತ್ವ ನೀಡಿದರು. ವೇದಿಕೆಯಲ್ಲಿ ಉಮ್ಮರ್ ಮಂಜೇಶ್ವರ ಕ್ರಿಸ್ಮಸ್ ಶುಭಾಷಯ ಹಾಡಿನೊಂದಿಗೆ ಸೇರಿದವರನ್ನು ರಂಜಿಸಿದರು. ಬಳಿಕ ಶಾರದ ಆಟ್ರ್ಸ್ ಕಲಾವಿದರಿಂದ ತುಳು ಹಾಸ್ಯಮಯ ನಾಟಕ ಹಾಗೂ ಬಳಿಕ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.
ಕ್ರಿಸ್ಮಸ್ ಸಹಮಿಲನ
0
ಡಿಸೆಂಬರ್ 28, 2022