ಆಲೂಗಡ್ಡೆ ಅತ್ಯುತ್ತಮವಾದ ಪೋಷಕಾಂಶಗಳಿರುವ ಆಹಾರ, ಆದರೆ ತುಂಬಾ ಜನರು ಆಲೂಗಡ್ಡೆ ತಿಂದ್ರೆ ಗ್ಯಾಸ್ಟ್ರಿಕ್ ಬರುತ್ತೆ, ಮಧುಮೇಹ ಬರುತ್ತೆ ಎಂಬೆಲ್ಲಾ ಕಾರಣಗಳನ್ನು ಹೇಳಿ ಆಲೂಗಡ್ಡೆಯನ್ನು ದೂರವಿಡುತ್ತಾರೆ. ಆಲೂಗಡ್ಡೆ ತಿಂದ್ರೆ ನಿಜವಾಗಲೂ ಮಧುಮೇಹ ಬರುವುದೇ? ಮಧುಮೇಹಿಗಳು ಆಲೂಗಡ್ಡೆ ತಿನ್ನಬಹುದೇ ಎಂಬೆಲ್ಲಾ ಮಾಹಿತಿ ತಿಳಿಯೋಣ:
ಮಧುಮೇಹವಿಲ್ಲ, ಆದರೆ ಆಲೂಗಡ್ಡೆ ತಿನ್ನವುದರಿಂದ ಮಧುಮೇಹ ಬರುವ ಸಾಧ್ಯತೆ ಇದೆಯೇ?
ನಿಮಗೆ ಮಧುಮೇಹ ಬರುವ ಸಾಧ್ಯತೆಗಳು ಅಂದರೆ ಅಧಿಕ ಮೈತೂಕ, ವಂಶವಾಹಿಯಾಗಿ ಬರುವ ಸಾಧ್ಯತೆ, ಗರ್ಭಾವಸ್ಥೆಯಲ್ಲಿ ಮಧುಮೇಹವಿದ್ದರೆ (ಅಧ್ಯಯನ ಪ್ರಕಾರ ಗರ್ಭಾವಸ್ಥೆಯಲ್ಲಿ ಮಧುಮೇಹ ಬಂದ್ರೆ ನಂತರ ಮಧುಮೇಹ ಬರುವ ಸಾಧ್ಯತೆ ತುಂಬಾ ಇದೆ) ಇಂಥವರು ಮಧುಮೇಹ ಬಾರದಂತೆ ತಡೆಯಲು ಆಹಾರಕ್ರಮ ಹಾಗೂ ವ್ಯಾಯಾಮದ ಕಡೆ ತುಂಬಾನೇ ಗಮನ ಹರಿಸಬೇಕು. ಆಹಾರಕ್ರಮದಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಅಧಿಕವಿರುವ ಆಹಾರ ಸೇವನೆ ಕಡಿಮೆ ಮಾಡಿ, ನಾರಿನ ಪದಾರ್ಥಗಳಿರುವ ಆಹಾರ ಹೆಚ್ಚಾಗಿ ಸೇವಿಸಬೇಕು.
ನೀವು ಆಲೂಗಡ್ಡೆಯನ್ನು ತುಂಬಾ ಬೇಯಿಸಿದರೆ ಅದರ ಗ್ಲೈಸೆಮಿಕ್ ಇಂಡೆಕ್ಸ್ ಅಧಿಕವಾಗುವುದು, ಆದ್ದರಿಂದ ತುಂಬಾ ಬೇಯಿಸಬೇಡಿ, ಹದವಾಗಿ ಬೇಯಿಸಿ ಬಳಸಿ.
ಇನ್ನು ಆಲೂಗಡ್ಡೆಯ ಸಿಪ್ಪೆ ಸುಲಿದು ಬೇಯಿಸುವ ಬದಲಿಗೆ ಸಿಪ್ಪೆ ಸಹಿತ ಬೇಯಿಸಿ, ಇದರಿಂದ ಸ್ವಲ್ಪ ನಾರಿನ ಪದಾರ್ಥ ದೇಹವನ್ನು ಸೇರುತ್ತದೆ ಅಲ್ಲದೆ ಜೀರ್ಣಕ್ರಿಯೆ ಸ್ವಲ್ಪ ನಿಧಾನವಾಗುವುದು, ಹೀಗಾಗಿ ಆಲೂಗಡ್ಡೆಯನ್ನು ಸಿಪ್ಪೆಸಹಿತ ತಿನ್ನಿ.
ಮಧುಮೇಹಿಗಳು ಆಲೂಗಡ್ಡೆಯನ್ನು ತಿನ್ನಲೇಬಾರದೇ?
ಅದು ತಪ್ಪು ಕಲ್ಪನೆ, ಮಧುಮೇಹಿಗಳು ಆಲೂಗಡ್ಡೆ ತಿನ್ನಬಹುದು, ಮಿತಿಯಲ್ಲಿ ತಿನ್ನಬೇಕು, ಏಕೆಂದರೆ ಇದರಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಅಧಿಕವಿರುವುದರಿಂದ ತಿಂದಾಗ ರಕ್ತದಲ್ಲಿ ಸಕ್ಕರೆಯಂಶ ತಕ್ಷಣ ಹೆಚ್ಚಾಗುವುದು.
ಆಲೂಗಡ್ಡೆ ಬದಲಿಗೆ ಯಾವ ಆಹಾರ ಬಳಸಬಹುದು
* ಕ್ಯಾರೆಟ್
* ಹೂಕೋಸು
* ಸಿಹಿಕುಂಬಳಕಾಯಿ
* ಸಿಹಿಗೆಣಸು
* ಧಾನ್ಯಗಳು
ಮಧುಮೇಹ ನಿಯಂತ್ರಣಕ್ಕೆ ಯಾವ ಬಗೆಯ ಆಹಾರಗಳು ಒಳ್ಳೆಯದು?
* ಅವೋಕಾಡೋ
* ಬ್ರೊಕೋಲಿ
* ಎಲೆಕೋಸು
* ಸೆಲರಿ
* ಸೌತೆಕಾಯಿ
* ಬಟಾಣಿ
* ಅಣಬೆ
* ಆಲೀವ್
* ಈರುಳ್ಳಿ
* ಟೊಮೆಟೊ
* ಸೊಪ್ಪು
* ಮೀನು
* ನಟ್ಸ್ ಮತ್ತು ಮೊಟ್ಟೆ
* ಚಕ್ಕೆ ಮತ್ತು ಅರಿಶಿಣ ಪುಡಿ
* ಹಾಲಿನ ಉತ್ಪನ್ನಗಳು
* ಪ್ರೊಬಯೋಟಿಕ್ ಆಹಾರ
* ಸ್ಟ್ರಾಬೆರ್ರಿ
* ಕಿತ್ತಳೆ
*ನಿಂಬೆ ಹಣ್ಣು
ಮಧುಮೇಹ ತಡೆಗಟ್ಟಲು ಯಾವ ಅಂಶಗಳ ಕಡೆ ಗಮನ ಕೊಡಬೇಕು?
* ಮೈ ತೂಕ: ತುಂಬಾ ಮೈ ತೂಕ ಹೊಂದಿದ್ದರೆ ಆಹಾರಕ್ರಮ ಹಾಗೂ ವ್ಯಾಯಾಮದ ಮೂಲಕ ಸಮತೂಕ ಮೈಕಟ್ಟು ಪಡೆಯಲು ಪ್ರಯತ್ನಿಸಿ. ತೂಕ ಇಳಿಕೆಗೆ ಯಾವುದೇ ಶಾರ್ಟ್ ಕಟ್ ಬೇಡ. ಯಾವುದೇ ಪೇಡ್ ಡಯಟ್ ಬೇಡ. ದಿನದಲ್ಲಿ ಅರ್ಧ ಗಂಟೆ ವ್ಯಾಯಾಮ ಮಾಡಿ.
ಈ ಬಗೆಯ ಯೋಗಾಸನಗಳು ಮಧುಮೇಹ ಬಾರದಂತೆ ತಡೆಗಟ್ಟಲು ಸಹಕಾರಿ:
* ಸೂರ್ಯ ನಮಸ್ಕಾರ
* ಧನುರ್ಸಾನ
* ಪಶ್ಚಿಮೋತ್ತಾಸನ
* ವಿಪರೀತಕರಣಿ
* ಭುಜಾಂಗಾಸನ
* ಶವಾಸನ
ಈ ಬಗೆಯ ಪ್ರಾಣಯಾಮ ಕೂಡ ಮಧುಮೇಹ ತಡೆಗಟ್ಟುತ್ತದೆ
ಭಸ್ತಿರಿಕಾ ಪ್ರಾಣಯಾಮ
ಇದು ಹೇಗೆ ಸಹಕಾರಿ: ಈ ಪ್ರಾಣಯಾಮ ಮಾಡುವುದರಿಂದ ಚಯಪಚಯ ಕ್ರಿಯೆ ಉತ್ತಮವಾಗುವುದು.
* ಇನ್ಸುಲಿನ್ ಉತ್ಪತ್ತಿಗೆ ಸಹಕಾರಿ
ಭ್ರಮರಿ ಪ್ರಾಣಯಾಮ
ಭ್ರಮರಿ ಉಸಿರಾಟದಲ್ಲಿ ಹೊಟ್ಟೆ ಒಳಗೆ ಹೋಗುತ್ತದೆ, ಈ ರೀತಿಯಾಗುವುದರಿಂದ ಮೇಧೋಜೀರಕ ಗ್ರಂಥಿ ಇನ್ಸುಲಿನ್ ಉತ್ಪತ್ತಿ ಮಾಡಲು ಸಹಕಾರಿ.
ಕಪಾಲಭಾತಿ ಪ್ರಾಣಯಾಮ
ಕಪಾಲಭಾತಿಯಲ್ಲಿ ರಕ್ತಸಂಚಾರ ಸರಾಗವಾಗಿ ಇದರಿಂದ ಚಯಪಚಯಕ್ರಿಯೆ ಮತ್ತಷ್ಟು ಉತ್ತಮವಾಗುವುದು.