ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಧನುಸಂಕ್ರಮಣ ಮಹೋತ್ಸವದ ಸಂದರ್ಭದಲ್ಲಿ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ವಿದುಷಿ ಅಂಕಿತ ಎನ್.ಕೊಳಂಬೆ ಇವರಿಂದ ಭರತನಾಟ್ಯ ಪ್ರದರ್ಶನಗೊಂಡಿತು.
ಅಂಕಿತ ಅವರು ಮಂಗಳೂರು ಸನಾತನ ನಾಟ್ಯಾಲಯದ ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿಶೇಖರ್ ಮತ್ತು ವಿದುಷಿ ಶ್ರೀಲತಾ ನಾಗರಾಜ್ ಇವರ ಶಿಷ್ಯೆಯಾಗಿದ್ದಾರೆ. ಚಂದ್ರಶೇಖರ ಶೆಟ್ಟಿ ಅವರ ನಿರ್ದೇಶನದಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ನಡೆದ ಭರತನಾಟ್ಯ ಜನಮನಸೂರೆಗೊಂಡಿತು. ನಟುವಾಂಗದಲ್ಲಿ ಶಾರದಾ ಮಣಿಶೇಖರ್, ಹಾಡುಗಾರಿಕೆ ಶರತ್ ಕುಮಾರ್, ಮೃದಂಗದಲ್ಲಿ ರಾಕೇಶ್ ಹೊಸಬೆಟ್ಟು, ಕೊಳಲಿನಲ್ಲಿ ಅಭಿಷೇಕ್ ಎಂ.ಬಿ. ಜೊತೆಗೂಡಿದರು. ದೇವಸ್ಥಾನದ ಆಡಳಿತ ಸಮಿತಿ ಪದಾಧಿಕಾರಿಗಳು ದೀಪಬೆಳಗಿಸುವ ಸಂದಭರ್ದಲ್ಲಿ ಉಪಸ್ಥಿತರಿದ್ದರು.