ಪೆರ್ಲ: ವರ್ಷಗಳಿಂದ ಕಿಡ್ನಿ ಸಂಬಂಧಿತ ಅಸೌಖ್ಯದಿಂದ ಕಂಗಾಲಾಗಿದ್ದ ಪೆರ್ಲ ಸಮೀಪದ ಬಜಕೂಡ್ಲು ನಿವಾಸಿ ಬಾಲಕೃಷ್ಣ ಆಚಾರ್ಯರ ಪುತ್ರ ಭರತ್ ರಾಜ್ (35) ಕಿಡ್ನಿ ವರ್ಗಾವಣೆಯ ಬಳಿಕ ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ಮುಂಜಾನೆ ಮಂಗಳೂರು ಖಾಸಗೀ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಚಿನ್ನ ಕುಸರಿ ಕೆಲಸಗಾರರಾಗಿದ್ದ ಭರತ್ ರಾಜ್ ಕಳೆದ ಹಲವಾರು ವರ್ಷಗಳಿಂದ ಎರಡು ಕಿಡ್ನಿ ಕಳಕೊಂಡಿದ್ದ ಅವರಿಗೆ ದಾನಿಗಳ ಸಹಕಾರದಲ್ಲಿ ಹಣ ಸಂಗ್ರಹಿಸಿ ಸ್ವತಃ ತಾಯಿಯ ಒಂದು ಕಿಡ್ನಿಯನ್ನು ಬದಲಾಯಿಸಿ ಇಡಲಾಗಿತ್ತು. ಬಳಿಕ ಅಲ್ಪ ಚೇತರಿಸಿಕೊಂಡಿದ್ದ ಇವರು ಮನೆಯಲ್ಲಿಯೇ ಚಿಕ್ಕಪುಟ್ಟ ಚಿನ್ನದ ಕೆಲಸಗಳನ್ನು ನಿರ್ವಹಿಸಿಕೊಂಡಿದ್ದರು. ಇದೀಗ ಕಳೆದ ಎರಡು ಮೂರು ತಿಂಗಳ ಹಿಂದೆ ಪುನಃ ಅಸೌಖ್ಯ ಕಾಣಿಸಿಕೊಂಡಿದ್ದು ಬದಲಾಯಿಸಿದ ಕಿಡ್ನಿಯು ಹಾನಿಗೊಂಡಿರುವುದಾಗಿ ವೈದ್ಯರು ದೃಡೀಕರಿಸಿದ್ದರು. ಇದಕ್ಕಾಗಿ ತುರ್ತು ಕಿಡ್ನಿ ಬದಲಾವಣೆಯ ಚಿಕಿತ್ಸೆಗಾಗಿ ಮಂಗಳೂರು ಖಾಸಗೀ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದು, ಎರಡು ದಿನಗಳ ಹಿಂದೆ ಕಿಡ್ನಿ ಬದಲಾಯಿಸಲಾಗಿತ್ತು. ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವ ನಡುವೆ ಇಂದು ಬೆಳಿಗ್ಗೆ ಚಿಕಿತ್ಸೆಗೆ ಸ್ಪಂದಿಸದೆ ನಿಧನರಾಗಿರುವುದಾಗಿ ತಿಳಿದು ಬಂದಿದೆ. ಮೃತರು ತಂದೆ ಬಾಲಕೃಷ್ಣ ಆಚಾರ್ಯ, ತಾಯಿ ಮನೋರಮ, ಸಹೋದರ ವರುಣ್ ರಾಜ್,ಸಹೋದರಿ ಚೈತ್ರ ಹಾಗೂ ಅಪಾರ ಬಂಧು ಬಳಗವನ್ನಗಲಿದ್ದಾರೆ.
ಕಿಡ್ನಿ ವರ್ಗಾವಣೆಯ ಬಳಿಕ ಚಿಕಿತ್ಸೆಗೆ ಸ್ಪಂದಿಸದೆ ಪೆರ್ಲದ ಭರತ್ ರಾಜ್ ನಿಧನ
0
ಡಿಸೆಂಬರ್ 15, 2022
Tags