ಕಾಸರಗೋಡು: ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಸಂತ್ರಸ್ತರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ನಡೆಯಲಿರುವ ವೈದ್ಯಕೀಯ ಶಿಬಿರದಲ್ಲಿ ಭಾಗವಹಿಸಲು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ನಮೂನೆಯು ಜಿಲ್ಲೆಯ ಎಲ್ಲಾ ಅಕ್ಷಯ ಕೇಂದ್ರಗಳಲ್ಲಿ ಲಭ್ಯವಿದ್ದು, ಭರ್ತಿ ಮಾಡಿದ ಅರ್ಜಿಯನ್ನು ನಂತರ ಆಧಾರ್, ಪಡಿತರ ಚೀಟಿ, ವೈದ್ಯಕೀಯ ದಾಖಲೆಗಳು, ವೈದ್ಯಕೀಯ ಮಂಡಳಿ ಯಾ ಸದಸ್ಯತ್ವ ಪ್ರಮಾಣಪತ್ರ ಪ್ರತಿಯೊಂದಿಗೆ ಆಯಾ ಪಂಚಾಯಿತಿಯ ಅಧೀನದಲ್ಲಿರುವ ಸರ್ಕಾರಿ ಆಸ್ಪತ್ರೆಗಳಿಗೆ (ಸಿಎಚ್‍ಸಿ/ಪಿಎಚ್‍ಸಿ/ಎಫ್‍ಎಚ್‍ಸಿ/ತಾಲೂಕು ಆಸ್ಪತ್ರೆ) ಸಲ್ಲಿಸಬೇಕು. ಅರ್ಜಿಯನ್ನು ಸ್ವೀಕರಿಸಲು ಕೊನೆಯ ದಿನಾಂಕ ಡಿಸೆಂಬರ್ 20 ಆಗಿದ್ದು, ಹೆಚ್ಚಿನ ಮಾಹಿತಿಗಾಗಿ ಸನಿಹದ ಸರ್ಕಾರಿ ಆಸ್ಪತ್ರೆಯನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಪ್ರಕಟಣೆ ತಿಳಿಸಿದೆ.
ಎಂಡೋಸಲ್ಫಾನ್ ವೈದ್ಯಕೀಯ ಶಿಬಿರ-ಅರ್ಜಿ ಸಲ್ಲಿಸಲು ಸೂಚನೆ
0
ಡಿಸೆಂಬರ್ 07, 2022
Tags