ನವದೆಹಲಿ: ತನಗೆ ಶೇ. 100 ಅಂಗವೈಕಲ್ಯ ಇದೆ ಎಂದು ಅಂದಾಜಿಸಿ ಲೇಡಿ ಹಾರ್ಡಿಂಗ್ ವೈದ್ಯಕೀಯ ಕಾಲೇಜು ನೀಡಿರುವ ಅಂಗವೈಕಲ್ಯ ಪ್ರಮಾಣ ಪತ್ರವನ್ನು ಪ್ರಶ್ನಿಸಿ ವೈದ್ಯಕೀಯ ಶಿಕ್ಷಣ ಆಕಾಂಕ್ಷಿಯೋರ್ವ ಸಲ್ಲಿಸಿದ ಅರ್ಜಿಯ ಕುರಿತು ವಿಚಾರಣೆ ನಡೆಸಿದ ದಿಲ್ಲಿ ಉಚ್ಚ ನ್ಯಾಯಾಲಯ ಕೇಂದ್ರ ಸರಕಾರ ಹಾಗೂ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ)ಕ್ಕೆ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿದೆ.
ತನಗೆ ಶೇ. 60 ಚಲನಶೀಲತೆಯ ಅಂಗವೈಕಲ್ಯ ಇದೆ. ಅಂಗವಿಕಲರ ಮಂಡಳಿ ತಾನು ಯಾವುದೇ ಸಹಾಯಕ ಸಾಧನಗಳನ್ನು ಬಳುತ್ತಿಲ್ಲ ಎಂದು ಪ್ರತಿಪಾದಿಸಿದ ಹೊರತಾಗಿಯೂ ತನಗೆ ಶೇ. 100 ಅಂಗವೈಕಲ್ಯ ಇದೆ ಎಂದು ಅಂದಾಜಿಸಿರುವುದು ಅಸಮರ್ಥನೀಯ ಎಂದು ದೂರುದಾರರು ಹೇಳಿದ್ದಾರೆ.
ನ್ಯಾಯಮೂರ್ತಿ ವಿಕಾಸ್ ಮಹಾಜನ್ ಅವರು ಕೇಂದ್ರ ಸರಕಾರ, ಎನ್‌ಎಂಸಿ, ವೈದ್ಯಕೀಯ ಸಮಾಲೋಚನೆ ಸಮಿತಿ (ಎಂಸಿಸಿ), ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ, ಲೇಡಿ ಹಾಡಿಂಗ್ ವೈದ್ಯಕೀಯ ಕಾಲೇಜು ಹಾಗೂ ಅಂಗವೈಕಲ್ಯ ಇರುವ ವ್ಯಕ್ತಿಗಳ ಸಬಲೀಕರಣ ಇಲಾಖೆಗೆ ನೋಟಿಸು ಜಾರಿ ಮಾಡಿದೆ ಹಾಗೂ ಪ್ರತಿಕ್ರಿಯೆ ಕೋರಿದೆ.
ಪ್ರತಿ ಅಪಿಡವಿಟ್ ಅನ್ನು ನಾಲ್ಕು ವಾರಗಳ ಒಳಗೆ ಸಲ್ಲಿಸುವಂತೆ ನ್ಯಾಯಾಲಯ ಹೇಳಿದೆ ಹಾಗೂ ಅರ್ಜಿಯ ವಿಚಾರಣೆಯನ್ನು ಫೆಬ್ರವರಿ 27ಕ್ಕೆ ಮುಂದೂಡಿದೆ.
ನ್ಯಾಯವಾದಿಗಳಾದ ಅಸಾದ್ ಅಲ್ವಿ ಹಾಗೂ ಸಾದಿಯಾ ರೋಹ್ಮಾ ಖಾನ್ ಅವರ ಮೂಲಕ ಅರ್ಜಿ
ಸಲ್ಲಿಸಿರುವ ದೂರುದಾರ ಉಸ್ಮಾನ್, ತಾನು ನೀಟ್-ಯುಜಿ-2022 ಪರೀಕ್ಷೆ ಬರೆದು
ಉತ್ತೀರ್ಣನಾದೆ. ಅನಂತರ ಎನ್‌ಎಂಸಿಯ ಶಾಸನಬದ್ಧ ನಿಯಮಗಳ ಪ್ರಕಾರ ಮೌಲ್ಯಮಾಪನ ಮಾಡಲು
ಡಿಜಿಎಚ್‌ಎಸ್ನ ಎಂಸಿಸಿ ಸ್ಥಾಪಿಸಿದ ನಿಯೋಜಿತ ಅಂಗವೈಕಲ್ಯ ಅಂದಾಜು ಮಂಡಳಿಗೆ ವರದಿ
ಮಾಡಿದ್ದೆ ಎಂದು ಹೇಳಿದ್ದಾರೆ.
ಈ ಪ್ರಕರಣದಲ್ಲಿ ನಿಯೋಜಿದ ವೈದ್ಯಕೀಯ ಅಂದಾಜು ಮಂಡಳಿಯಾಗಿರುವ ಲೇಡಿ ಹರ್ಡಿಂಗೆ ವೈದ್ಯಕೀಯ ಕಾಲೇಜು, ಸಹ ಆಸ್ಪತ್ರೆಗಳು ತನಗೆ ಶೇ. 100 ಅಂಗವಿಕಲತೆ ಇದೆ ಎಂದು ಅಕ್ಟೋಬರ್ 8ರಂದು ಅಂದಾಜಿಸಿ ಪ್ರಮಾಣ ಪತ್ರ ನೀಡಿತ್ತು ಎಂದು ಅವರು ಹೇಳಿದ್ದಾರೆ.