ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ವರ್ಚುವಲ್ ಮೂಲಕ ಶನಿವಾರ ನಡೆದ 48ನೇ ಜಿಎಸ್ಟಿ (ಸರಕು ಮತ್ತು ಸೇವಾ ತೆರಿಗೆ) ಮಂಡಳಿ ಸಭೆಯಲ್ಲಿ ಮೂರು ವಿಧದ ಪ್ರಕರಣಗಳನ್ನು ಕ್ರಿಮಿನಲ್ ಸ್ವರೂಪದ ಪಟ್ಟಿಯಿಂದ ಹೊರಗಿಡುವ ಶಿಫಾರಸು ಸೇರಿದಂತೆ ಹಲವು ಕ್ರಮಗಳಿಗೆ ಅನುಮೋದನೆ ನೀಡಲಾಗಿದೆ.
ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸುವಿಕೆ, ಸಾಕ್ಷ್ಯ ಸಾಮಗ್ರಿಗಳ ತಿರುಚುವಿಕೆ ಮತ್ತು ಮಾಹಿತಿ ನೀಡುವಲ್ಲಿ ವಿಫಲತೆಯನ್ನು ಕ್ರಿಮಿನಲ್ ಪಟ್ಟಿಯಿಂದ ಹೊರಗೆ ಇಡಲು ನಿರ್ಧರಿಸಲಾಗಿದೆ ಎಂದು ಜಿಎಸ್ಟಿ ಮಂಡಳಿ ಹೇಳಿಕೆ ತಿಳಿಸಿದೆ. ತೆರಿಗೆ ವಂಚನೆಗೆ ಸಂಬಂಧಿಸಿದಂತೆ ಕ್ರಿಮಿನಲ್ ಸ್ವರೂಪದ ವಿಚಾರಣೆ ನಡೆಸುವ ಮೊತ್ತದ ಪರಿಮಿತಿಯನ್ನು 2 ಕೋಟಿ ರೂ.ಗೆ ಹೆಚ್ಚಳ ಮಾಡಲಾಗಿದೆ. ಇದೇ ವೇಳೆಗೆ ಇನ್ವಾಯ್್ಸ ವಂಚನೆ ಪ್ರಕರಣಗಳಲ್ಲಿ ಈ 1 ಕೋಟಿ ರೂ.ಗೆ ಉಳಿಸಿ ಕೊಳ್ಳಲಾಗಿದೆ. ತೆರಿಗೆ ವಂಚನೆ ಪ್ರಕರಣದಲ್ಲಿ ವಿಧಿಸುವ ಚಕ್ರಬಡ್ಡಿಯನ್ನು ಶೇ. 25ರಿಂದ 100ಕ್ಕೆ ಮಿತಿಗೊಳಿಸ ಲಾಗಿದೆ. ಇದು ಶೇ. 50ರಿಂದ 150ರಲ್ಲಿ ಇತ್ತು.
ಹೊಸದಾಗಿ ಯಾವುದೇ ತೆರಿಗೆ ಇಲ್ಲ. ಹೆಸರು ಬೇಳೆ (ಚಿಲ್ಕಾ) ಮತ್ತು ಸಿಂಧಿ ಹೆಸರು ಬೇಳೆ (ಚುನಿ/ಚುರಿ), ಹಳದಿ ಖಂಡ ಸೇರಿ ದ್ವಿದಳ ಧಾನ್ಯಗಳ ಹೊಟ್ಟಿನ ಮೇಲಿದ್ದ ಶೇ. 5ರ ತೆರಿಗೆಯನ್ನು ಶೂನ್ಯಕ್ಕೆ ತರಲಾಗಿದೆ. ಪೆಟ್ರೋಲ್ ಜತೆಗೆ ಮಿಶ್ರಣ ಮಾಡುವ ಎಥನಾಲ್ ಅಲ್ಕೋಹಾಲ್ ಮೇಲಿನ ಶೇ. 18 ತೆರಿಗೆಯನ್ನು ಶೇ. 5ಕ್ಕೆ ಇಳಿಸಲಾಗಿದೆ. ಮೆಂತ್ಯದೆಣ್ಣೆಗೆ ಇರುವಂತೆ ಮೆಂತ್ಯ ಅರ್ವೆನ್ಸಿಸ್ (ಮೆಂತ್ಯದ ಒಂದು ಪಂಗಡ) ಮೇಲಿನ ತೆರಿಗೆಯನ್ನು ರಿವರ್ಸ್ ಚಾರ್ಜ್ ತಂತ್ರದಂತೆ ಪೂರೈಕೆದಾರರ ಬದಲಿಗೆ ಸ್ವೀಕರಿಸುವವರ ಹೊಣೆಗಾರಿಕೆ ತರಲು ನಿರ್ಧರಿಸಲಾಗಿದೆ. ಸಿಟಿಎಚ್ 1702 ಅಡಿಯಲ್ಲಿ ವರ್ಗೀಕರಿಸ ಲಾದ ರಾಬ್ ಸಾಲ್ವೆೆಂಟ್ಗೆ (ಬೆಲ್ಲದ ಪಾಕದಂತಹ ಪದಾರ್ಥ) ಮತ್ತು ಫ್ರೆೈಮ್ಳಿಗೆ ಶೇ. 18 ಜಿಎಸ್ಟಿ ಇದೆ.
ಆನ್ಲೈನ್ ಗೇಮಿಂಗ್ಗೆ ಶೇ.28 ತೆರಿಗೆ: ವಿಮಾ ಕಂಪನಿಗಳ 'ನೋ ಕ್ಲೇಮ್ ಬೋನಸ್'ಗೆ ತೆರಿಗೆ ಇರುವುದಿಲ್ಲ. ಆನ್ಲೈನ್ ಗೇಮಿಂಗ್ ಮತ್ತು ಕ್ಯಾಸಿನೊ ಮೇಲಿನ ಜಿಎಸ್ಟಿ ಕುರಿತು ಸಭೆಯಲ್ಲಿ ಚರ್ಚೆ ಆಗಲಿಲ್ಲ. ಏಕೆಂದರೆ ಇವುಗಳ ಮೇಲಿನ ತೆರಿಗೆ ನಿಷ್ಕರ್ಷೆ ಕುರಿತು ಮೇಘಾಲಯದ ಸಿಎಂ ಕಾನ್ರಾಡ್ ಸಂಗ್ಮಾ ನೇತೃತ್ವದ ಸಮಿತಿ ಇತ್ತೀಚೆಗಷ್ಟೆ ವರದಿ ಸಲ್ಲಿಸಿದ್ದು, ಅದನ್ನು ಜಿಎಸ್ಟಿ ಮಂಡಳಿಯ ಸದಸ್ಯರಿಗೆ ಹಂಚಿರಲಿಲ್ಲ ಎಂದು ಕಂದಾಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರಾ ಹೇಳಿದರು. ಆನ್ಲೈನ್ ಗೇಮಿಂಗ್ನಲ್ಲಿ ಗಳಿಸಿದ ಮೊತ್ತಕ್ಕೆ ಅನುಗುಣವಾಗಿ ಶೇ. 28ರ ತೆರಿಗೆಯೇ ಮುಂದುವರಿಯಲಿದೆ ಎಂದು ಕೇಂದ್ರ ಪರೋಕ್ಷ ತೆರಿಗೆ ಮುಖ್ಯಸ್ಥ ವಿವೇಕ್ ಜೋಹ್ರಿ ಸ್ಪಷ್ಟಪಡಿಸಿದರು.
ಬೆಂಗಳೂರು: ಜಿಎಸ್ಟಿಗೆ ಸಂಬಂಧಿಸಿದಂತೆ ಅನೇಕ ಪ್ರಕರಣಗಳು ನ್ಯಾಯಾಲಯಕ್ಕೆ ಹೋಗುತ್ತಿವೆ. ಅದಕ್ಕಾಗಿ ಟ್ರಿಬ್ಯೂನಲ್ ರಚನೆ ಮಾಡುವ ಬಗ್ಗೆ ಮುಂದಿನ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣ ಹೈಕೋರ್ಟ್ ಮೆಟ್ಟಿಲೇರು ವುದರಿಂದ ನ್ಯಾಯದಾನವೂ ವಿಳಂಬವಾಗುತ್ತಿದೆ. ಇದರಿಂದ ಸರ್ಕಾರದ ಆದಾಯಕ್ಕೂ ಅಡ್ಡಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಟ್ರಿಬ್ಯೂನಲ್ ರಚನೆಯಾದರೆ ಬಹಳಷ್ಟು ಪ್ರಕರಣಗಳಿಗೆ ಅತಿ ಶೀಘ್ರದಲ್ಲಿ ಪರಿಹಾರ ದೊರೆಯುತ್ತದೆ. ರಾಜ್ಯದ ಆದಾಯಕ್ಕೂ ಅನುಕೂಲವಾಗುತ್ತದೆ ಎಂದರು. ಸರ್ಕಾರಿ ಸಂಸ್ಥೆಗಳಿಗೆ ಜಿಎಸ್ಟಿಯಿಂದ ವಿನಾಯಿತಿ ಇರುವಂತೆ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಾದ ಬಿಬಿಎಂಪಿ, ಬೆಂಗಳೂರು ಜಲಮಂಡಳಿ, ವಿದ್ಯುಚ್ಛಕ್ತಿ ಮಂಡಳಿ ಇವುಗಳಿಗೂ ವಿನಾಯಿತಿ ನೀಡಬೇಕೆನ್ನುವ ಬಗ್ಗೆ, ಯಾವ ಸೇವೆಗಳಿಗೆ ವಿನಾಯಿತಿ ನೀಡುವ ಬಗ್ಗೆಯೂ ಕೆಲವೊಂದು ತಿದ್ದುಪಡಿಗಳನ್ನು ಮಾಡುವ ಬಗ್ಗೆ ಮುಂದಿನ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.
ಎಸ್ಯುುವಿ ಮೇಲೆ ಸೆಸ್ ಹೆಚ್ಚಳ: ಎಸ್ಯುುವಿ (1500 ಸಿಸಿ ಇಂಜಿನ್, 4000 ಮಿ.ಮೀ. ಉದ್ದ ಮೀರಿದ, ಗ್ರೌಂಡ್ ಕ್ಲಿಯರೆನ್ಸ್ 180 ಮಿ.ಮೀ. ಅಥವಾ ಅದಕ್ಕೂ ಹೆಚ್ಚಿರುವ) ಕಾರುಗಳ ಮೇಲೆ ಶೇ. 22 ಹೆಚ್ಚುವರಿ (ಸೆಸ್) ತೆರಿಗೆ ವಿಧಿಸಲು ಜಿಎಸ್ಟಿ ಮಂಡಳಿ ಸಭೆ ನಿರ್ಧರಿಸಿದೆ.