ಕಾಸರಗೋಡು: ಎಂಡೋ ಸಲ್ಫಾನ್ ಸಂತ್ರಸ್ತರಿಗೆ ರಾಜ್ಯ ಸರಕಾರದಿಂದ ಎಣ್ಮಕಜೆ ಗ್ರಾಮದಲ್ಲಿ ಐದು ಎಕರೆ ಜಾಗದಲ್ಲಿ ಸಾಯಿ ಟ್ರಸ್ಟ್ ನಿರ್ಮಿಸಿರುವ 36 ಮನೆಗಳನ್ನು ಮೂಲ ಸೌಕರ್ಯಗಳನ್ನು ಪೂರೈಸಿ ಮಾರ್ಚ್‍ನಲ್ಲಿ ಹಸ್ತಾಂತರಿಸಲಾಗುವುದು. ಕಂದಾಯ ಸಚಿವ ಕೆ.ರಾಜನ್ ಅವರ ಅಧ್ಯಕ್ಷತೆಯಲ್ಲಿ ಕಾಸರಗೋಡು ಸರ್ಕಾರಿ ಅತಿಥಿ ಗೃಹದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಯಿತು.
ಎಡಿಎಂ ಎ.ಕೆ. ರಮೇಂದ್ರನ್, ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷಾಧಿಕಾರಿ ಇ.ಪಿ.ರಾಜಮೋಹನ್, ಜಿಲ್ಲಾಧಿಕಾರಿ (ಎಲ್.ಎ) ಎಸ್.ಶಶಿಧರನಪಿಳ್ಳೆ, ಮಂಜೇಶ್ವರ ತಹಸೀಲ್ದಾರ್ ರವೀಂದ್ರನ್, ಪಂಚಾಯತ್ ಅಧಿಕಾರಿಗಳು, ವಿದ್ಯುತ್ ಮಂಡಳಿ ಕಾರ್ಯನಿರ್ವಾಹಕ ಎಂಜಿನಿಯರ್ ನಾಗರಾಜ ಭಟ್, ಜಲ ಪ್ರಾಧಿಕಾರದ ಅಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು.
ಎಣ್ಮಕಜೆ: ಮಾರ್ಚ್‍ನಲ್ಲಿ ಸಾಯಿ ಗ್ರಾಮದ ಮನೆಗಳ ಹಸ್ತಾಂತರ
0
ಡಿಸೆಂಬರ್ 19, 2022
Tags