ಪೆರ್ಲ: ಧಾರ್ಮಿಕ ಪ್ರಜ್ಞೆಯಿಂದ ವಿಮುಖರಾಗುತ್ತಿರುವುದರಿಂದ ಜನರಲ್ಲಿ ಗೊಂದಲ ಹೆಚ್ಚಾಗಲು ಕಾರಣವಾಗಿರುವುದಾಗಿ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ತಿಳಿಸಿದ್ದಾರೆ. ಅವರು ಭಾನುವಾರ ಪೆರ್ಲ ಶ್ರೀ ಅಯ್ಯಪ್ಪ ಭಜನಾಮಂದಿರದ ನೂತನ ಪಾಕಶಾಲೆ ಉದ್ಘಾಟನೆ ಮತ್ತು ಕುಣಿತ ಭಜನಾ ತಂಡದ ರಂಗಪ್ರವೇಶ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು.
ಎಲ್ಲರನ್ನೂ ಒಟ್ಟುಗೂಡಿಸುವ ಶಕ್ತಿ ಭಜನೆಗಿದೆ. ಭಜನೆ ಎಂದಿಗೂ ವಿಭಜನೆಗೆ ಹಾದಿ ಮಾಡಿಕೊಡದು. ಎಳೆವೆಯಿಂದಲೇ ಮಕ್ಕಳಿಗೆ ಭಜನೆಯ ಬಗ್ಗೆ ಆಸಕ್ತಿ ಮೂಡಿಸುವ ಕೆಲಸ ಹೆತ್ತವರು ಮೂಡಿಸಬೇಕು ಜತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಧಾರ್ಮಿಕ ಶ್ರದ್ಧಾಕೇಂದ್ರಗಳು ಭಜನಾತರಬೇತಿಯನ್ನು ಆಯೋಜಿಸಬೇಕು ಎಂದು ತಿಳಿಸಿದರು. ವೇದಮೂರ್ತಿ ಶಿವಸುಬ್ರಹ್ಮಣ್ಯ ಭಟ್ ಶುಳುವಾಲುಮೂಲೆ ಧಾರ್ಮಿಕ ವಿಧಿ ವಿಧಾನ ನಡೆಸಿಕೊಟ್ಟರು. ಇದೇ ಸಂದರ್ಭ ಶ್ರೀ ಅಯ್ಯಪ್ಪ ಭಜನಾಮಂದಿರದಲ್ಲಿ ನಡೆಯಲಿರುವ ಅಭಿವೃದ್ಧಿಕಾರ್ಯಗಳಿಗೆ ಮೊತ್ತ ಸಂಗ್ರಹಕ್ಕಾಗಿ ಆಯೋಜಿಸಲಾದ ವಿಶೇಷ ಕೂಪನ್ ಬಿಡುಗಡೆಗೊಳಿ¸ಸಲಾಯಿತು. ಶ್ರೀ ಅಯ್ಯಪ್ಪ ಭಜನಾ ಮಂದಿರ ಸಮಿತಿ ಪದಾಧಿಕಾರಿಗಳು, ಗುರುಸ್ವಾಮಿಗಳು, ಶ್ರೀ ಅಯ್ಯಪ್ಪ ವ್ರತಧಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಪುಣ್ಯಾಹ, ಗಣಪತಿ ಹೋಮ, ಶ್ರೀ ಅಯ್ಯಪ್ಪ ಸ್ವಾಮಿ ಕುಣಿತ ಭಜನಾ ತಂಡಗಳಿಂದ ಕುಣಿತ ಭಜನೆ, ವಿವಿಧ ಭಜನಾ ಸಂಘಗಳಿಂದ ಭಜನಾಸೇವೆ, ಕುಣಿತಭಜನೆಯೊಂದಿಗೆ ಉಲ್ಫೆ ಮೆರವಣೀಗೆ, ನಿಶ್ಮಿತಾನಿರಂಜನ್ ಪೆರ್ಲ ಮತ್ತು ಬಳಗದವರಿಂದ ನೃತ್ಯೋತ್ಸವ ನಡೆಯಿತು.
ಧಾರ್ಮಿಕ ಪ್ರಜ್ಞೆಯಿಂದ ದೂರಾಗುತ್ತಿರುವುದು ಜನರಲ್ಲಿ ಗೊಂದಲ ಹೆಚ್ಚಲು ಕಾರಣ: ಮಾಣಿಲಶ್ರೀ
0
ಡಿಸೆಂಬರ್ 04, 2022