HEALTH TIPS

ಏರ್‌ಫಿಲ್ಟರ್‌ಗಳಲ್ಲಿನ ಸೂಕ್ಷ್ಮಾಣುಗಳ ನಾಶಕ್ಕೆ ನೂತನ ತಂತ್ರಜ್ಞಾನ

 

              ನವದೆಹಲಿ: 'ಏರ್‌ ಫಿಲ್ಟರ್‌'ಗಳಲ್ಲಿ ವಾಸ ಮಾಡಿ, ತೊಂದರೆ ಕೊಡುವ ಸೂಕ್ಷ್ಮಾಣುಗಳನ್ನು ನಾಶಪಡಿಸಲು ಚಹಾ ಎಲೆಗಳಲ್ಲಿ ಕಂಡುಬರುವ ಕೆಲ ಪದಾರ್ಥಗಳನ್ನು ಬಳಸಿದ ತಂತ್ರಜ್ಞಾನವನ್ನು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಅಭಿವೃದ್ಧಿಪಡಿಸಿದೆ.

                ಈ ತಂತ್ರಜ್ಞಾನವಿರುವ ಏರ್‌ಫಿಲ್ಟರ್‌ಗಳನ್ನು ಎನ್‌ಎಬಿಎಲ್ ಮಾನ್ಯತೆ ಪಡೆದಿರುವ ಪ್ರಯೋಗಾಲಯಗಳಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಫಿಲ್ಟರ್‌ಗಳು 'ಸಾರ್ಸ್‌-ಕೋವ್-2' ವೈರಾಣುಗಳ ವಿರುದ್ಧ ಕೂಡ ಶೇ 99.24ರಷ್ಟು ಪರಿಣಾಮಕಾರಿ ಎಂಬುದು ತಿಳಿದುಬಂದಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ತಿಳಿಸಿದೆ.

                   ಐಐಎಸ್‌ಸಿಯ ಪ್ರೊ.ಸೂರ್ಯಸಾರಥಿ ಬೋಸ್‌ ಹಾಗೂ ಪ್ರೊ.ಕೌಶಿಕ್‌ ಚಟರ್ಜಿ ನೇತೃತ್ವದ ಸಂಶೋಧನಾ ತಂಡ ಈ ಫಿಲ್ಟರ್‌ಗಳನ್ನು ಅಭಿವೃದ್ಧಿಪಡಿಸಿದೆ. 'ಪಾಲಿಫಿನಾಲ್‌' ಮತ್ತು 'ಪಾಲಿಕೆಟಿಯೋನಿಕ್ ಪಾಲಿಮರ್'ಗಳನ್ನು ಬಳಸಿ ಈ ಫಿಲ್ಟರ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ಪದಾರ್ಥಗಳು 'ಗ್ರೀನ್‌ ಟಿ'ಯಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.

                     ಎಸಿ, ಏರ್‌ ಪ್ಯೂರಿಫೈರ್‌ಗಳನ್ನು ಬಹುಕಾಲದವರೆಗೆ ಬಳಕೆ ಮಾಡಿದಾಗ, ಈ ಸಾಧನಗಳ ಏರ್‌ಫಿಲ್ಟರ್‌ಗಳಲ್ಲಿ ಸೂಕ್ಷ್ಮಾಣುಗಳು ಸೇರಿಕೊಳ್ಳುತ್ತವೆ. ಇವು ಫಿಲ್ಟರ್‌ಗಳಲ್ಲಿನ ರಂಧ್ರಗಳನ್ನು ಮುಚ್ಚುವ ಮೂಲಕ ಅವುಗಳು ಕಡಿಮೆ ಬಾಳಿಕೆ ಬರುವಂತೆ ಮಾಡುವ ಜೊತೆಗೆ, ಹಲವಾರು ಕೊರೊನಾ ವೈರಸ್‌ ಸೇರಿದಂತೆ ಹಲವು ರೋಗಕಾರಕಗಳ ಪ್ರಸರಣಕ್ಕೂ ಕಾರಣವಾಗುತ್ತವೆ.

                   ಈ ನೂತನ ತಂತ್ರಜ್ಞಾನವಿರುವ ಫಿಲ್ಟರ್‌ಗಳು ಸೂಕ್ಷ್ಮಾಣುಗಳನ್ನು ನಾಶ ಮಾಡಲಿವೆ ಎಂದೂ ಪ್ರಕಟಣೆ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries