ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಧನು ಸಂಕ್ರಮಣ ಮಹೋತ್ಸವು ಶನಿವಾರ ಮಧ್ಯಾಹ್ನ ರಾಜಾಂಗಣ ಪ್ರಸಾದದೊಂದಿಗೆ ಸಂಪನ್ನಗೊಂಡಿತು.
ಶುಕ್ರವಾರ ಬೆಳಗ್ಗೆ ಗಣಪತಿ ಹೋಮದೊಂದಿಗೆ ಕಾರ್ಯಕ್ರಮಗಳು ಆರಂಭವಾಗಿತ್ತು. ವಿವಿಧ ಭಜನಾ ಸಂಘಗಳಿಂದ ಭಜನೆ, ಶ್ರೀ ದೇವರಿಗೆ ಏಕಾದಶ ರುದ್ರಾಭಿಷೇಕ, ಮಧ್ಯಾಹ್ನ ತುಲಾಭಾರ ಸೇವೆ, ಮಹಾಪೂಜೆ ಶ್ರೀ ಶಿವಲಿ ಉತ್ಸವ ಜರಗಿತು. ಸಂಜೆ ದೀಪಾರಾಧನೆ, ಗಂಗಾಧರ ಮಾರಾರ್ ನೀಲೇಶ್ವರ ಮತ್ತು ಬಳಗದವರಿಂದ ತಾಯಂಬಕ, ರಂಗಪೂಜೆ ಜರಗಿತು. ರಾತ್ರಿ ಶ್ರೀ ದೇವರ ಬಲಿ ಉತ್ಸವ, ವಸಂತಕಟ್ಟೆ ಪೂಜೆ, ಬೆಡಿಸೇವೆ ನಡೆಯಿತು. ಶನಿವಾರ ಬೆಳಗ್ಗೆ ಪೂಜೆ, ಶ್ರೀ ದೇವರ ಬಲಿ ಉತ್ಸವ, ದರ್ಶನಬಲಿ, ರಾಜಾಂಗಣ ಪ್ರಸಾದ ನಡೆಯಿತು. ಊರಪರವೂರ ಭಗವದ್ಭಕ್ತರು ಪಾಲ್ಗೊಂಡಿದ್ದರು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಶುಕ್ರವಾರ ಬೆಳಗ್ಗೆ ಯಕ್ಷವಿಹಾರಿ ಬದಿಯಡ್ಕ ತಂಡದವರಿಂದ ಯಕ್ಷಗಾನ ತಾಳಮದ್ದಳೆ, ವೈಭÀವಿ ಕುಂಬಳೆ ಅವರಿಂದ ಹರಿಕಥೆ, ರಾತ್ರಿ ವಿದುಷಿ ಅಂಕಿತಾ ಎನ್.ಕೊಳಂಬೆ ಅವರಿಂದ ಭರತನಾಟ್ಯ, ಡಾ. ವಾಣಿಶ್ರೀ ಕಾಸರಗೋಡು ಮತ್ತು ತಂಡದವರಿಂದ ಸಾಹಿತ್ಯ ಸಾಂಸ್ಕøತಿಕ ಸಂಭ್ರಮ ಹಾಗೂ ಶಿವಶಕ್ತಿ ಪೆರಡಾಲ ಪ್ರಾಯೋಜಕತ್ವದಲ್ಲಿ ಜಗದೀಶ ಆಚಾರ್ಯ ಮತ್ತು ಬಳಗದವರಿಂದ ಸಂಗೀತ ಗಾನ ಸಂಭ್ರಮ ಪ್ರದರ್ಶನಗೊಂಡಿತು.