ಕೊಚ್ಚಿ: ಹೈಕೋರ್ಟ್‍ನ ನೌಕರರಿಗೆ ನಿವೃತ್ತಿ ವಯಸ್ಸು ಮೀರಿ ಮುಂದುವರಿಯಲು ಅವಕಾಶವಿಲ್ಲ ಎಂದು ಏಕ ಪೀಠ ಹೇಳಿದೆ.
ತೆರೆದ ನ್ಯಾಯಾಲಯದಲ್ಲಿ ನೀಡಿದ್ದ ಆದೇಶಕ್ಕೆ ತಿದ್ದುಪಡಿ ತಂದು ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಆದೇಶ ನೀಡಿದ್ದಾರೆ. ಇಬ್ಬರು ಉದ್ಯೋಗಿಗಳ ನಿವೃತ್ತಿ ವಯಸ್ಸು ಏರಿಸಲಾಗಿದೆ ಎಂಬ ಸುದ್ದಿ ಚರ್ಚೆಗೆ ಕಾರಣವಾಗಿತ್ತು.
ಜಂಟಿ ರಿಜಿಸ್ಟ್ರಾರ್ ವಿಜಯಕುಮಾರಿಯಮ್ಮ ಮತ್ತು ದಫೇದಾರ್ ಸಜೀವ್ ಕುಮಾರ್ ಅವರು ನಿವೃತ್ತಿ ವಯಸ್ಸನ್ನು ಹೆಚ್ಚಿಸಲು ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಅನು ಶಿವರಾಮನ್ ಅವರಿದ್ದ ಪೀಠವು ಹೈಕೋರ್ಟ್ ನೌಕರರ ನಿವೃತ್ತಿ ವಯಸ್ಸಿಗೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನಡೆಸುತ್ತಿದೆ. ಈ ಪೀಠದ ಆದೇಶ ಬಾಕಿ ಇರುವಾಗಲೇ ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಅವರಿಬ್ಬರ ನಿವೃತ್ತಿ ಅವಧಿಯನ್ನು ವಿಸ್ತರಿಸಿ ಆದೇಶ ಹೊರಡಿಸಿದ್ದು ಚರ್ಚೆಗೆ ಗ್ರಾಸವಾಯಿತು. ವೇತನ ಪಡೆಯದೇ ಸೇವೆಯಲ್ಲಿ ಮುಂದುವರಿಯಬಹುದು ಎಂದು ಆದೇಶ ಹೊರಡಿಸಲಾಗಿತ್ತು.
ನೌಕರರ ನಿವೃತ್ತಿ ನ್ಯಾಯಾಲಯದ ಅಂತಿಮ ನಿರ್ಧಾರಕ್ಕೆ ಒಳಪಟ್ಟಿರುತ್ತದೆ ಎಂದು ಪೀಠ ನಿನ್ನೆ ಹೇಳಿದೆ. ನಿವೃತ್ತಿ ವಯಸ್ಸನ್ನು ಹೆಚ್ಚಿಸುವಂತೆ ಸರ್ಕಾರಕ್ಕೆ ನ್ಯಾಯಾಲಯ ಶಿಫಾರಸು ಮಾಡಿದೆ. ಈ ಬಗ್ಗೆ ಸರ್ಕಾರದ ನಿರ್ಧಾರ ಇನ್ನμÉ್ಟೀ ಬರಬೇಕಿದೆ. ನ್ಯಾಯಾಲಯದ ಕಲಾಪಗಳು ಡಿಜಿಟಲ್ ಆಗುತ್ತಿರುವಾಗ ಅನುಭವಿ ಉದ್ಯೋಗಿಗಳು ಅತ್ಯಗತ್ಯ ಎಂದು ಪೀಠವು ಸೂಚಿಸಿತು.
ನಿವೃತ್ತಿ ಆದೇಶದ ತಿದ್ದುಪಡಿ; ನೌಕರರು ವಯಸ್ಸು ಮೀರಿ ಮುಂದುವರಿಯುವಂತಿಲ್ಲ
0
ಡಿಸೆಂಬರ್ 21, 2022