ಮಂಜೇಶ್ವರ: ಕೇಂದ್ರ ಸÀರ್ಕಾರ ಒದಗಿಸಿರುವ ಅಲ್ ಇಂಡಿಯಾ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್ (ಏಮ್ಸ್) ನ್ನು ಕಾಸರಗೋಡಿನಲ್ಲೇ ಸ್ಥಾಪಿಸಬೇಕೆಂದು ಆಗ್ರಹಿಸಿ ಪೀಸ್ ಕ್ರಿಯೇಟಿವ್ ಮಂಜೇಶ್ವರ ಹಾಗೂ ಕುಂಜತ್ತೂರು ಶಾಲೆಗಳಲ್ಲಿ ವಿದ್ಯಾರ್ಥಿಗಳು, ಅಧ್ಯಾಪಕರುಗಳು ಹಾಗೂ ಸಿಬ್ಬಂದಿಗಳು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪೋಸ್ಟ್ ಕಾರ್ಡ್ ಮೂಲಕ ವಿನಂತಿ ಪತ್ರವನ್ನು ರವಾನಿಸಿದರು.
ಕಾಸರಗೋಡು ಜಿಲ್ಲೆಯಲ್ಲಿನ ಆರೋಗ್ಯ ವಲಯದಲ್ಲಿನ ಹಿಂದುಳಿವಿಕೆ ಹಾಗೂ ಕೋವಿಡ್ ಕಾಲದಲ್ಲಿ ಜಿಲ್ಲೆಯ ಗಡಿ ಪ್ರದೇಶಗಳಲ್ಲಿ ಸರಿಯಾದ ವೈದ್ಯಕೀಯ ಸೇವೆ ಲಭಿಸದೆ ಹಲವಾರು ಮಂದಿ ಸಾವನ್ನಪ್ಪಿದ್ದನ್ನು ವಿವರಿಸಿ ಕಾಸರಗೋಡು ಜಿಲ್ಲೆಗೆ ಏಮ್ಸ್ ಆಸ್ಪತ್ರೆ ಒದಗಿಸಬೇಕೆಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭ ಶಾಲಾ ಆಡಳಿತ ಸಮಿತಿ ಅಧ್ಯಕ್ಷ ಅಬ್ದುಲ್ ರಹ್ಮಾನ್ ಅರಿಮಲ, ಶಾಲಾ ಸಿ ಇ ಒ ಮೊಹಮ್ಮದಲಿ ಅರಿಮಲ, ಸಂಯೋಜಕ ಅಬ್ದುಲ್ ರಹ್ಮಾನ್ ಹಾಗೂ ಅಧ್ಯಾಪಕರುಗಳು ಸೇರಿದಂತೆ ಹಲವರು ಪಾಲ್ಗೊಂಡರು.
ಏಮ್ಸ್ ಕಾಸರಗೋಡಿನಲ್ಲೇ ಸ್ಥಾಪಿಸುವಂತೆ ಪೀಸ್ ಕ್ರಿಯೇಟಿವ್ ಶಾಲಾ ವಿದ್ಯಾರ್ಥಿಗಳಿಂದ ಪ್ರಧಾನಿ ಮೋದಿಗೆ ಪೋಸ್ಟ್ ಕಾರ್ಡ್ ಮೂಲಕ ಮನವಿ
0
ಡಿಸೆಂಬರ್ 07, 2022
Tags