ಇರಿಂಞಲಕುಡ: ಪ್ರೇಮ ವಿವಾಹವಾದ ಪುತ್ರಿಯೋರ್ವೆ ತಂದೆಯಿಂದ ಮದುವೆ ವೆಚ್ಚವನ್ನು ಪಡೆಯಲು ಅರ್ಹರಲ್ಲ ಎಂದು ಕೌಟುಂಬಿಕ ನ್ಯಾಯಾಲಯ ತೀರ್ಪು ನೀಡಿದೆ.
ಇರಿಂಞಲಕುಡ ಕೌಟುಂಬಿಕ ನ್ಯಾಯಾಲಯ ನಿರ್ಣಾಯಕ ಆದೇಶ ಹೊರಡಿಸಿದೆ. ವಡವನ್ನೂರಿನವರಾದ ಸೆಲ್ವದಾಸ್ ವಿರುದ್ಧ ಪುತ್ರಿ ನಿವೇದಿತಾ ಅರ್ಜಿ ಸಲ್ಲಿಸಿದ ಪುತ್ರಿ.
ತಂದೆ ವಿವಾಹ ಖರ್ಚು ಅಥವಾ ಬೇರೆ ಯಾವುದೇ ಹಣವನ್ನು ನೀಡುತ್ತಿಲ್ಲ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ವಿವಾಹ ವೆಚ್ಚವಾಗಿ 35 ಲಕ್ಷ ರೂ., ಇತರ ವೆಚ್ಚ 35 ಸಾವಿರ ನೀಡಬೇಕು ಎಂಬ ಬೇಡಿಕೆ ಇರಿಸಿದ್ದಳು. 2010 ರಿಂದ ತಂದೆ ತಾಯಿ ತನಗೆ ಖರ್ಚಿಗೆ ಹಣ ನೀಡುತ್ತಿಲ್ಲ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಆದರೆ ನಿವೇದಿತಾ ಅವರ ಆರೋಪ ಸುಳ್ಳಾಗಿದ್ದು, 2013ರ ಡಿಸೆಂಬರ್ ವರೆಗೆ ಮಗಳ ಖರ್ಚನ್ನು ಭರಿಸಿ ಮಗಳಿಗೆ ಬಿಡಿಎಸ್ ವರೆಗೆ ಕಲಿಸಿದ್ದರು ಎಂದು ಸೆಲ್ವದಾಸ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಮಗಳದ್ದು ಪ್ರೇಮ ವಿವಾಹ, ಆದರೆ ತಂದೆಗೆ ಪ್ರೇಮ ವಿವಾಹದ ಬಗ್ಗೆ ತಿಳಿಸಿರಲಿಲ್ಲ. ತನಗೆ ತಿಳಿಸದೆ ವಿವಾಹವಾದ ಪುತ್ರಿಯ ಮದುವೆ ವೆಚ್ಚ ಭರಿಸಲು ಸಾಧ್ಯವಿಲ್ಲ ಎಂದು ಸೆಲ್ವದಾಸ್ ನ್ಯಾಯಾಲಯಕ್ಕೆ ತಿಳಿಸಿದರು. ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ನ್ಯಾಯಾಲಯ ಶೆಲ್ವದಾಸ್ ಅವರ ವಾದವನ್ನು ಒಪ್ಪಿಕೊಂಡು ನಿವೇದಿತಾ ಅರ್ಜಿಯನ್ನು ತಿರಸ್ಕರಿಸಿತು.
ಪ್ರೀತಿಸಿ ವಿವಾಹ: ವಿವಾಹ ವೆಚ್ಚ ನೀಡಬೇಕೆಂದು ಪುತ್ರಿಯಿಂದ ನ್ಯಾಯಾಲಯಕ್ಕೆ ಮೊರೆ: ಅರ್ಜಿ ವಜಾಗೊಳಿಸಿದ ಕೌಟುಂಬಿಕ ನ್ಯಾಯಾಲಯ
0
ಡಿಸೆಂಬರ್ 30, 2022
Tags