ಬದಿಯಡ್ಕ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಪಕ್ಷದ 138 ನೇ ಜನ್ಮದಿನ ಪ್ರಯುಕ್ತ ಸಂದೇಶ ಯಾತ್ರೆ ಮತ್ತು ಸಾರ್ವಜನಿಕ ಸಮಾವೇಶ ಬದಿಯಡ್ಕ ಪೇಟೆಯಲ್ಲಿ ನಡೆಯಿತು. ನ್ಯಾಯವಾದಿ ಶ್ರಿಜೀತ್ ಮಡೆಕ್ಕಲ ಉದ್ಘಾಟಿಸಿದರು. ಅಧ್ಯಕ್ಷ ಎಂ ನಾರಾಯಣ ಮಣಿಯಾಣಿ ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ಕಾಂಗ್ರೆಸ್ ನೇತಾರ ಪಿಜಿ ಚಂದ್ರಹಾಸ ರೈ, ಖಾದರ್ ಮಾನ್ಯ, ಪಂಚಾಯತ್ ಉಪಾಧ್ಯಕ್ಷ ಎಂ ಅಬ್ಬಾಸ್, ಗಂಗಾಧರ ಗೊಳಿಯಡ್ಕ, ಚಂದ್ರಹಾಸ ಮಾಸ್ತರ್ ಮಾತನಾಡಿದರು. ಶಾಫಿ ಗೊಳಿಯಾಡ್ಕ, ವಾರ್ಡ ಸದಸ್ಯರಾದ ಜಯಶ್ರೀ, ಅನಸೂಯಾ ಮಾನ್ಯ , ಕುಮಾರನ್ ನಾಯರ್, ಶಾಫಿ ಗೊಳಿಯಡಿ, ಯುವ ಕಾಂಗ್ರೆಸ್ ನೇತಾರರಾದ ಶ್ರೀನಾಥ್, ರಾಮಕೃಷ್ಣ ವಿದ್ಯಾ ಗಿರಿ, ಕೃಷ್ಣಕುಮಾರ್, ಮ್ಯಾತೀವ್ ಬದಿಯಡ್ಕ ನೇತೃತ್ವ ನೀಡಿದರು.... ನಂತರ ಬದಿಯಡ್ಕ ಮಂಡಲ ಕಾಂಗ್ರೆಸ್ ಕಚೇರಿಯಲ್ಲಿ ಕೇಕ್ ಕಟ್ ಕತ್ತರಿಸಿ 138ನೇ ಪಕ್ಷದ ಜನ್ಮ ದಿನಾಚರಣೆ ಆಚರಿಸಲಾಯಿತು.