ತ್ರಿಶೂರ್: ಹೆಸರಾಂತ ಮಲಯಾಳಂ ಚಲನಚಿತ್ರ ಮತ್ತು ಸಾಕ್ಷ್ಯಚಿತ್ರ ನಿರ್ದೇಶಕ ಹಾಗೂ ವ್ಯಂಗ್ಯಚಿತ್ರಕಾರ ಕೆ.ಪಿ.ಶಶಿ (64) ಇಂದು ನಿಧನರಾಗಿದ್ದಾರೆ. ಅವರು ತ್ರಿಶೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಸಾಮಾಜಿಕ ಮತ್ತು ಮಾನಸಿಕ ಹಿಂಸೆಗೆ ಗುರಿಯಾಗುವ ಮಲಯಾಳಿ ಮಹಿಳೆಯರ ಜೀವನದ ಕುರಿತಾದ ಅವರ 'ಇಲಯಂ ಮುಳ್ಳುಂ' ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಲಭಿಸಿತ್ತು.
ʼರೆಸಿಸ್ಟಿಂಗ್ ಕೋಸ್ಟಲ್ ಇನ್ವೇಷನ್ʼ, ʼಅಮೇರಿಕಾ ಅಮೇರಿಕಾʼ, ʼಲಿವಿಂಗ್ ಇನ್ ಫಿಯರ್ ಅಂಡ್ ಡೆವಲಪ್‌ಮೆಂಟ್ ಅಟ್ ಗನ್‌ಪಾಯಿಂಟ್ʼ ಅವರ ಇತರ ಗಮನಾರ್ಹ ಚಿತ್ರಗಳಾಗಿತ್ತು. 2013 ರಲ್ಲಿ ಹೊರಬಂದ ಸಾಕ್ಷ್ಯಚಿತ್ರ 'ಫ್ಯಾಬ್ರಿಕೇಟೆಡ್' ದೊಡ್ಡ ಚರ್ಚೆಯಾಗಿತ್ತು.
70 ರ ದಶಕದಲ್ಲಿ ಜೆಎನ್‌ಯು ವಿದ್ಯಾರ್ಥಿಯಾಗಿದ್ದ ಅವರು ಕಾರ್ಟೂನಿಸ್ಟ್ ಆಗಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದ್ದರು. ಮುಂಬೈನ ಫ್ರೀ ಪ್ರೆಸ್ ಜರ್ನಲ್‌ನಲ್ಲಿ ಕಾರ್ಟೂನಿಸ್ಟ್ ಆಗಿ ಕೆಲಸ ಮಾಡಿದ್ದ ಅವರು ವಿಬ್ಗ್ಯೋರ್ ಚಲನಚಿತ್ರೋತ್ಸವದ ಸಂಸ್ಥಾಪಕರಲ್ಲಿ ಒಬ್ಬರು.
ಕೆಪಿ ಶಶಿಯವರ ಚಿತ್ರಗಳು
ರೆಸಿಸ್ಟಿಂಗ್ ಕೋಸ್ಟಲ್ ಇನ್ವೇಷನ್ (2007), ಎ ಕ್ಲೈಮೇಟ್ ಕಾಲ್ ಫ್ರಮ್ ದಿ ಕೋಸ್ಟ್
(2009), ಎ ವ್ಯಾಲಿ ರಿಫ್ಯೂಸಸ್ ಟು ಡೈ (1988), ವಿ ಹೂ ಮೇಕ್ ಹಿಸ್ಟರಿ (1985),
ಲಿವಿಂಗ್ ಇನ್ ಫಿಯರ್ (1986), ಇನ್ ನೇಮ್ ಆಫ್ ಮೆಡಿಸಿನ್ (1987), ವಾಯ್ಸ್ ಫ್ರಮ್
ರೂಯಿನ್ಸ್ (2016), ಇಲಾ ಯುಮ್ ಮುಲ್ಲಮ್ (1991), ಏಕ್ ಅಲಗ್ ಮೋಸಮ್ (2003), ಶ್.
ಸೈಲೆನ್ಸ್ ಪ್ಲೀಸ್ (2003).