ಕಾಸರಗೋಡು: ಸಂಸದ ರಾಜಮೋಹನ್ ಉ್ನಣ್ಣಿತ್ತಾನ್ ಅವರು ಮಹಿಳಾ ವಿರೋಧಿ ಹೇಳಿಕೆ ನೀಡಿ ವಿವಾದಕ್ಕೆಡೆಯಾಗಿದ್ದಾರೆ. ಕಾಂಗ್ರೆಸ್ ನಾಯಕ, ಮಾಜೊಇ ಡಿಸಿಸಿ ಅಧ್ಯಕ್ಷ ಅಡ್ವ. ಸಿ.ಕೆ.ಶ್ರೀಧರನ್ ಹೆಣ್ಣಾಗಿ ಹುಟ್ಟದೇ ಇರುವುದು ಅದೃಷ್ಟ ಎಂದು ರಾಜಮೋಹನ್ ಉಣ್ಣಿತ್ತಾನ್ ನೀಡಿರುವ ಹೇಳಿಕೆ ವಿವಾದ ಹುಟ್ಟುಹಾಕಿದೆ. ಶ್ರೀಧರನ್ ಒಬ್ಬ ವಂಚಕ ಎಂದು ರಾಜಮೋಹನ್ ಉಣ್ಣಿತ್ತಾನ್ ಹೇಳಿದ್ದಾರೆ.
ಸಿಕೆ ಶ್ರೀಧರನ್ ಹಣದ ಫಿಪಾಸು. ಕೊಲೆಯಾದ ಯುವಕರ ಕುಟುಂಬಗಳಿಗೆ ಸಿಕೆ ಶ್ರೀಧರನ್ ಮೋಸ ಮಾಡಿದ್ದಾರೆ. ಈ ದ್ರೋಹವನ್ನು ಸಮಾಜ ಎಂದಿಗೂ ಸಹಿಸುವುದಿಲ್ಲ ಎಂದಿರುವರು.
ಎರ್ನಾಕುಳಂನ ಹೋಟೆಲ್ ಕೊಠಡಿಯಲ್ಲಿ ಸಿ.ಕೆ.ಶ್ರೀಧರನ್ ಅವರಿಗೆ ಪ್ರಕರಣದ ಎಲ್ಲಾ ಮಾಹಿತಿಯನ್ನು ಕುಟುಂಬವು ಹಸ್ತಾಂತರಿಸಿತ್ತು. ಆಗ ಎಲ್ಲರೂ ಅವನನ್ನು ನಂಬಿದ್ದರು. ಆದರೆ ಮಾಹಿತಿ ಕೇಳಿದ ನಂತರ ಅವರು ಸಿಬಿಐ ತನಿಖೆಗೆ ಪರಾಧಿಗಳ ಪರ ಬ್ಯುಆಟ್ ಹಿಡಿದು ಕೊಲೆಯಾದ ಯುವಕರ ಕುಟುಂಬಕ್ಕೆ ಮೋಸಮಾಡಿದರು.
ಇದಕ್ಕೆಲ್ಲ ಶ್ರೀಧರನ ಹಣದ ದುರಾಸೆಯೇ ಕಾರಣ. ಹಣಕ್ಕಾಗಿ ಸಿಪಿಎಂ ಜೊತೆ ಅಪವಿತ್ರ ಸಂಬಂಧ ಬೆಳೆಸಿದ್ದಾರೆ. ಅವರು ಹೆಣ್ಣಾಗಿ ಹುಟ್ಟದೇ ಇರುವುದು ಕಾಞಂಗಾಡ್ ಜನರ ಅದೃಷ್ಟ ಎಂದಿರುವರು. ಮಾತಿನ ಓಘದಲ್ಲಿ ಹೇಳಿದ್ದರೂ, ಸ್ತ್ರೀ ವಿರುದ್ದ ಹೇಳಿಕೆ ಎಂಬ ಅಂಶವನ್ನು ಸಿಪಿಎಂ ಎತ್ತಿ ವಿವಾದ ಹುಟ್ಟುಹಾಕಿದೆ ಎನ್ನಲಾಗಿದೆ.
ಸಿ.ಕೆ.ಶ್ರೀಧರನ್ ಹಣದ ಆಸೆಯಿಂದ ಹೆಣ್ಣಾಗಿ ಹುಟ್ಟದೇ ಇರುವುದು ಅದೃಷ್ಟ; ವಿವಾದಿತ ಹೇಳಿಕೆ ನೀಡಿದ ಸಂಸದ ರಾಜಮೋಹನ್ ಉಣ್ಣಿತ್ತಾನ್
0
ಡಿಸೆಂಬರ್ 18, 2022