ಕಾಸರಗೋಡು: ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯ(ಪಿಎಫ್‍ಐ)ಸಂಘಟನೆಯ ಪ್ರಮುಖ ಆದಾಯಮಾರ್ಗ ಕೊಲ್ಲಿ ರಾಷ್ಟ್ರಗಳಾಗಿರುವುದಾಗಿ ರಾಷ್ಟ್ರೀಯ ತನಿಖಾ ಏಜನ್ಸಿ(ಎನ್‍ಐಎ)ಪತ್ತೆಹಚ್ಚಿದೆ. ಪಿಎಫ್‍ಐ ಸಂಘಟನೆಗೆ ಸೇರಿದ ನೂರಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ತನಿಖಾ ತಂಡ ಪತ್ತೆಹಚ್ಚಿದೆ. ನಿಷೇಧಿತ ಸಂಘಟನೆಯ ಆದಾಯ ಮಾರ್ಗ ಹಾಗೂ ಇದರ ವಹಿವಾಟುಗಳ ಬಗ್ಗೆ ತನಿಖೆ ನಡೆಸಿರುವ ಎನ್‍ಐಎ ಮುಂದಿನ ಕ್ರಮ ನಡೆಸಲು ಮುಂದಾಗಿದೆ.
ವಿದೇಶಗಳಲ್ಲಿ ಎನ್‍ಆರ್‍ಐ ಖಾತೆ ಹೊಂದಿರುವ ಸಂಘಟನೆ ಬೆಂಬಲಿಗರು ಊರಿನ ವಿವಿಧ ಬ್ಯಾಂಕುಗಳಿಗೆ ಹಣ ರವಾನಿಸುತ್ತಿದ್ದು, ಇಲ್ಲಿಂದ ಹಣವನ್ನು ಪಿಎಫ್‍ಐ ಮುಖಂಡರ ಖಾತೆಗಳಿಗೆ ವರ್ಗಾಯಿಸಲಾಗುತ್ತಿದೆ. ಕೊಲ್ಲಿ ರಾಷ್ಟ್ರಗಳಲ್ಲಿ ಬೇರೊಂದು ಸಂಘಟನೆ ಹೆಸರಲ್ಲಿ ಹಣ ಸಂಗ್ರಹಿಸಿ, ಅಲ್ಲಿಂದ ಹಣ ಊರಿಗೆ ರವಾನಿಸಲಾಗುತ್ತಿದೆ. ಕುವೈತ್ ಇಂಡಿಯಾ ಸೋಶಿಯಲ್ ಫಾರಂ ಎಂಬ ಹೆಸರಲ್ಲಿ ಕುವೈತ್‍ನಲ್ಲಿ ಪಿಎಫ್‍ಐ ಸಕ್ರಿಯವಾಗಿರುವುದನ್ನು ಎನ್‍ಐಎ ಪತ್ತೆಹಚ್ಚಿದೆ. ಭಾರತದಲ್ಲಿ ಚಟುವಟಿಕೆ ನಡೆಸಲು, ಫಾರಂ ಸದಸ್ಯರಿಂದ ವಾರ್ಷಿಕ ಸದಸ್ಯತನ ಶುಲ್ಕ ಖರೀದಿಸಿರುವುದನ್ನೂ ತನಿಖಾ ಸಂಸ್ಥೆ ಪತ್ತೆಹಚ್ಚಿದೆ. ಓಮಾನ್‍ನಲ್ಲೂ ಎರಡು ಫೌಂಡೇಶನ್‍ಗಳ ವಿರುದ್ಧ ತನಿಖೆ ವಿಸ್ತರಿಸಲಾಗಿದೆ. ಫೌಂಡೇಶನ್‍ನಿಂದ ಸಂಗ್ರಹಿಸಲಾದ ಹಣವನ್ನು ಊರಿಗೆ ರವಾನಿಸಿರುವುದನ್ನು ಪತ್ತೆಹಚ್ಚಲಾಗಿದೆ. ಇದರ ಹೊರತಾಗಿ ರಿಯಲ್ ಎಸ್ಟೇಟ್, ಪರವಾನಿಗಿ ಹೊಂದಿದ ಪೆಟ್ರೋಲ್ ಪಂಪುಗಳ ಮೂಲಕವೂ ಹಣ ಸಂಗ್ರಹಿಸಿ ಭಾರತದ ಖಾತೆಗೆ ರವಾನಿಸಲಾಗಿದೆ. ಊರಿನ ಮುಸ್ಲಿಮರ ಕಲ್ಯಾಣದ ಹೆಸರಲ್ಲಿ ಸಂಗ್ರಹಿಸಲಾಗುವ ಹಣವನ್ನು ಪಿಎಫ್‍ಐ, ಎಸ್‍ಡಿಪಿಐ ಮುಖಂಡರಿಗೆ ರವಾನಿಸಿರುವ ಮಾಹಿತಿಯನ್ನೂ ಕಲೆಹಾಕಲಾಗಿದೆ.
ರಿಯಲ್ ಎಸ್ಟೇಟ್,ಪೆಟ್ರೋಲ್ ಪಂಪು-ಕೊಲ್ಲಿ ದೇಶಗಳು ಪಿಎಫ್‍ಐ ಸಂಘಟನೆಗೆ ಆದಾಯ ಮಾರ್ಗ: ತನಿಖಾ ಏಜನ್ಸಿ ಪತ್ತೆ
0
ಡಿಸೆಂಬರ್ 28, 2022
Tags