ತಿರುವನಂತಪುರ: 'ನೆರೆಯ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧ್ಯವ ಇರಿಸಿಕೊಳ್ಳಲು ಭಾರತ ಬಯಸುತ್ತದೆ. ಆದರೆ, ರಾಷ್ಟ್ರದ ಭದ್ರತೆ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ' ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಶುಕ್ರವಾರ ಹೇಳಿದರು.
ಶಿವಗಿರಿ ಮಠದ 90ನೇ ವರ್ಷದ ತೀರ್ಥಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿ, 'ರಾಷ್ಟ್ರದ ಭದ್ರತೆ ವಿಷಯದಲ್ಲಿ ರಾಜಿ ಮಾಡಿಕೊಂಡು ಉತ್ತಮ ಸ್ನೇಹಸಂಬಂಧವನ್ನು ಭಾರತ ಇರಿಸಿಕೊಳ್ಳುವುದಿಲ್ಲ' ಎಂದರು. 'ಸ್ನೇಹಿತರನ್ನು ಬದಲಿಸಬಹುದು. ಆದರೆ, ನೆರೆಯವರನ್ನು ಬದಲಾಯಿಸಲು ಸಾಧ್ಯವಿಲ್ಲ' ಎನ್ನುವ ಮಾಜಿ ಪ್ರಧಾನಿ ವಾಜಪೇಯ ಅವರ ಮಾತನ್ನು ಸಚಿವರು ಸ್ಮರಿಸಿದರು.
'ಸೇನೆಯ ಬೆಂಬಲ ಹಾಗೂ ಪ್ರಧಾನಿ ಮೋದಿ ಅವರ ಮಾರ್ಗದರ್ಶನದಲ್ಲಿ ದೇಶವನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದೇನೆ. ಮಠದ ಸನ್ಯಾಸಿಗಳು ದೇಶದ ಆತ್ಮವನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ' ಎಂದರು.